ಮಡಿಕೇರಿ, ಮಾ. 21: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಹಾಗೂ ಪ್ರಾಯೋಜಿತ ಕಾರ್ಯಕ್ರಮ ಗಳಲ್ಲಿ ರಾಜ್ಯ, ಹೊರರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಆಸಕ್ತರಾದ ಹವ್ಯಾಸಿ ಕಲಾತಂಡಗಳ ಸಂಘಟಕರು ತಮ್ಮ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಕಲಾವಿದರ ವಿವರಗಳೊಂದಿಗೆ ಮೇ 2 ರೊಳಗೆ ಅರ್ಜಿಯನ್ನು ಯಕ್ಷಗಾನ ಅಕಾಡೆಮಿಗೆ ಸಲ್ಲಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ. ಹೆಗಡೆ ಅವರು ತಿಳಿಸಿದ್ದಾರೆ.