ಕುಶಾಲನಗರ, ಮಾ. 20: ಕುಶಾಲನಗರ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಅಂದಾಜು 20 ಸಾವಿರ ಮೌಲ್ಯದ ಬೆಡ್ ಶೀಟ್‍ಗಳನ್ನು ವಿತರಿಸಲಾಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್ ನೇತೃತ್ವದಲ್ಲಿ ಮಂಡಳಿಯ ಪದಾಧಿಕಾರಿಗಳು ವೈದ್ಯಾಧಿಕಾರಿ ಡಾ. ಮಧುಸೂದನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಬಿ.ಆರ್.ನಾಗೇಂದ್ರಪ್ರಸಾದ್, ಟ್ರಸ್ಟ್‍ನ ಕಾರ್ಯದರ್ಶಿ ಬಿ.ಎಲ್.ಅಶೋಕ್, ಉಪಾಧ್ಯಕ್ಷ ಬಿ.ಎಲ್.ಉದಯಕುಮಾರ್, ಖಜಾಂಚಿ ಪಿ.ಎನ್. ಅನಿಲ್, ಸಹಕಾರ್ಯದರ್ಶಿ ಎಸ್.ಎನ್. ಮಂಜುನಾಥ್, ನಿರ್ದೇಶಕರಾದ ಎಂ.ಪಿ.ಸತ್ಯನಾರಾಯಣ, ಎ. ಎಸ್.ಸುರೇಶ್ ಬಾಬು, ಬಿ.ಆರ್.ನಟರಾಜ್, ಕೆ.ಜೆ.ಸತೀಶ್, ಆಸ್ಪತ್ರೆಯ ಸಿಬ್ಬಂದಿ ವರ್ಗ ಇದ್ದರು.