ಗೋಣಿಕೊಪ್ಪ ವರದಿ, ಮಾ. 20: ಪೌರ ಕಾರ್ಮಿಕರಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳಬೇಕಿದೆ. ಪಟ್ಟಣಕ್ಕೆ ನಿತ್ಯ ಬರುವ ಜನರಿಂದ ವೈರಸ್ ಕಾರ್ಮಿಕರಿಗೆ ಬೇಗ ಹರಡುವ ಸಾಧ್ಯತೆ ಹೆಚ್ಚಿದೆ.

ಅವರಲ್ಲಿ ಸ್ವಚ್ಛತೆಗೆ ಜಾಗೃತಿ ಮೂಡಿಸಬೇಕಿದೆ. ಸಾಕಷ್ಟು ಕಾರ್ಮಿಕರು ಬರಿಗೈಯಲ್ಲಿ ಕಸ ಹೆಕ್ಕುವುದರಿಂದ ಆತಂಕವಿದೆ. ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಅವರಿಗೆ ಬೇಕಾದ ಗ್ಲೌಸ್, ಮಾಸ್ಕ್‍ಗಳನ್ನು ತಕ್ಷಣ ಒದಗಿಸುವ ಕೆಲಸವಾಗಬೇಕಿದೆ. ಅವರಿಗೆ ವಿಶೇಷವಾಗಿ ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮ ನಡೆಸಬೇಕಿದೆ. ಪಟ್ಟಣದ ಮೂಲೆ ಮೂಲೆಗಳಲ್ಲೂ ಸಂಚರಿಸುವ ಇವರ ಆರೋಗ್ಯ ಕೂಡ ಉತ್ತಮ ಸಮಾಜಕ್ಕೆ ಬೇಕಾಗಿದೆ ಎಂಬುವುದನ್ನು ಅರ್ಥೈಸಿಕೊಂಡು ಅವರಿಗೆ ಸೂಕ್ತ ಸವಲತ್ತು ನೀಡಬೇಕು ಎಂದು ಕೊಡಗು ಜಾಂಭವ ಯುವಸೇನೆ ಅಧ್ಯಕ್ಷ ಸಿಂಗಿ ಸತೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.