ಭಾಗಮಂಡಲ, ಮಾ. 20: ಬೆಟ್ಟಗೇರಿಯಲ್ಲಿ ಎರಡು ಅಂಗಡಿ ಸೇರಿದಂತೆ ಒಂದು ಗೋದಾಮಿಗೆ ಗುರುವಾರ ಆಕಸ್ಮಿಕ ಬೆಂಕಿ ಬಿದ್ದಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.ಬೆಟ್ಟಗೇರಿಯ ಅಬ್ದುಲ್ ಖಾದರ್ ಅವರ ಹಾರ್ಡ್‍ವೇರ್ ಶಾಪ್‍ನಲ್ಲಿ ಕಾಣಿಸಿಕೊಂಡ ಬೆಂಕಿ ಮತ್ತೆರಡು ಅಂಗಡಿಗಳಿಗೆ ವ್ಯಾಪಿಸಿದೆ.ಒಂದು ಮೊಬೈಲ್ ಅಂಗಡಿ ಹಾಗೂ ಕಾಫಿ ಗೋದಾಮು ಬೆಂಕಿಗಾಹುತಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಮಜೀದ್ ಮತ್ತು ಶಫೀಕ್ ಮಾಲಿಕತ್ವದ ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದು ಮದ್ಯಾಹ್ನದ ವೇಳೆ ಅವಘಡ ಸಂಭವಿಸಿದೆ.ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಘಟನೆಗೆ ಕಾರಣ ಎನ್ನಲಾಗಿದ್ದು ಬೆಂಕಿ ವ್ಯಾಪಿಸದಂತೆ ಸ್ಥಳೀಯರು ಪ್ರಯತ್ನಿಸಿದರು. ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ.