ಚೆಟ್ಟಳ್ಳಿ, ಮಾ. 20: ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಡಿಕೇರಿಯ ಯೂತ್ ಕಮಿಟಿಯ ಯುವಕರು ಮಹಾಮಾರಿ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಮಡಿಕೇರಿಯ ಯೂತ್ ಕಮಿಟಿಯ ಗೌರವಾಧ್ಯಕ್ಷ ಕಲೀಲ್ ಕ್ರಿಯೇಟಿವ್ ಹಾಗೂ ಅಧ್ಯಕ್ಷ ಜೈನುಲ್ ಆಬಿದ್ ನೇತೃತ್ವದಲ್ಲಿ ಮಡಿಕೇರಿ ನಗರದ ಮಸೀದಿಗಳ ಮುಂಭಾಗದಲ್ಲಿ ವಿಶೇಷ ಪ್ರಾರ್ಥನೆಯ ಬಳಿಕ ಕರ ಪತ್ರಗಳನ್ನು ಹಂಚುವ ಮೂಲಕ ಇದೊಂದು ಮಹಾ ದುರಂತ ಒಟ್ಟಾಗಿ ವೈರಸ್ ವಿರುದ್ಧ ಹೋರಾಡೋಣ, ರೋಗ ಹರಡದಂತೆ ಎಚ್ಚರ ವಹಿಸೋಣ, ಕೊರೊನದಿಂದ ಹೆದರಬೇಕಾಗಿಲ್ಲ. ಎಚ್ಚರದಿಂದ ಇರೋಣ ಹಾಗೂ ಸರಕಾರದ ಆದೇಶಗಳನ್ನು ಕಡೆಗಣಿಸದೆ ಸಂಪೂರ್ಣವಾಗಿ ಪಾಲಿಸುವಂತೆ ಯುವಕರು ಮನವಿ ಮಾಡಿದರು. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಭೇದಿ ಕಾಣಿಸಿಕೊಂಡರೆ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ಸರಫಾತ್, ಶಫೀಕ್, ಕಾರ್ಯದರ್ಶಿ ಸಮೀರ್, ಸದಸ್ಯರಾದ ಶುಹೈಲ್, ಕೈಫ್ ಇದ್ದರು.