ಮಡಿಕೇರಿ, ಮಾ. 19: ಕೆನಡಾ ರಾಷ್ಟ್ರದಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಮೂಲದ ಕೊಡವ ಜನಾಂಗದವರು ಸೇರಿ ಇತ್ತೀಚೆಗೆ ಸಂತೋಷ ಕೂಟವೊಂದನ್ನು ಹಮ್ಮಿಕೊಳ್ಳುವ ಮೂಲಕ ಸಂಭ್ರಮಾಚರಿಸಿದರು.

ದೂರದ ಕೆನಡಾದಲ್ಲಿ ಉದ್ಯೋಗ ಮತ್ತಿತರ ಕಾರಣಗಳಿಂದ ನೆಲೆಕಂಡಿರುವ ಕೊಡವ ಕುಟುಂಬದವರು, ಉದ್ಯೋಗಸ್ಥರು, ವಿದ್ಯಾರ್ಥಿಗಳು ಸೇರಿ 100 ಕ್ಕೂ ಅಧಿಕ ಕುಟುಂಬದವರು ಒಂದೆಡೆ ಸಮ್ಮಿಲನಗೊಂಡು ಜಿಲ್ಲೆಯ ಕುರಿತಾಗಿ ಸಂಸ್ಕøತಿ, ಆಚಾರ, ವಿಚಾರ, ಆಹಾರ ಪದ್ಧತಿಯ ಸವಿಯೊಂದಿಗೆ ಸಂತಸ ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಕೆನಡಾದ ಗೆಲಾಕ್ಸಿ ಕನ್‍ವೆನ್‍ಶನ್ ಸೆಂಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರ್ಯಾಮ್ಟನ್, ಒಂಟಾರಿಯೋ, ಟೊರಾಂಟೋ ವ್ಯಾಪ್ತಿಯಲ್ಲಿ ನೆಲೆಸಿರುವವರು ಸಂಸಾರ ಸಹಿತರಾಗಿ ಪಾಲ್ಗೊಂಡಿದ್ದರು. ಕೊಡವ ಸಂಸ್ಕøತಿಯ ಪಾಲನೆಯೊಂದಿಗೆ ಕಾವೇರಿ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳು, ನೃತ್ಯ, ಹಾಡು, ವಾಲಗತಾಟ್, ವಿವಿಧ ಬಗೆಯ ತಿಂಡಿ-ತಿನಿಸುಗಳ ಸ್ವಾದದೊಂದಿಗೆ ಕಾರ್ಯಕ್ರಮ ಜರುಗಿತು. ಪ್ರತಿ ವರ್ಷ ಇಲ್ಲಿನ ಕೆನಡಿಯನ್ ಕೊಡವಾಸ್ ಆರ್ಗನೈಜೇಷನ್ ಸಂಘದ ಮೂಲಕ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ. ಇಲ್ಲಿ ನೂತನವಾಗಿ ನೆಲೆ ಕಂಡಿರುವ ಜನಾಂಗದವರು ಈ ಸಂಘಟನೆ ಯೊಂದಿಗೆ ಸೇರ್ಪಡೆಗೊಳ್ಳ ಬಹುದಾಗಿದೆ. ಈ ಬಗ್ಗೆ ಮಾಹಿತಿಗೆ ಇ-ಮೇಲ್ gಣಚಿಞoಜಚಿvಚಿs@ gmಚಿiಟ.ಛಿom, ತಿebsiಣe: hಣಣಠಿ://ಞoಜಚಿvಚಿs.ಛಿಚಿ/ ಅನ್ನು ಗಮನಿಸಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.