ಸಿದ್ದಾಪುರ, 19 : ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಚಾಲಕನ ತಲೆಗೆ ಗಾಯವಾಗಿದೆ. ತಮಿಳುನಾಡಿನ ನಿವಾಸಿ ಮರ ವ್ಯಾಪಾರಿ ವಿನೋದ್ ಎಂಬುವವರು ಸಿದ್ದಾಪುರದಿಂದ ವಾಲ್ನೂರು ಮಾರ್ಗವಾಗಿ ಕುಶಾಲನಗರದತ್ತ ತೆರಳುವ ಸಂದರ್ಭ ತ್ಯಾಗತೂರು ಬಳಿ ಏಳನೇ ಹೊಸಕೋಟೆಯಿಂದ ಕುಶಾಲನಗರ ಮಾರ್ಗವಾಗಿ ವಾಲ್ನೂರು ಮೂಲಕ ಸಿದ್ದಾಪುರಕ್ಕೆ ಬರುತ್ತಿದ್ದ ಕಾರ್ ನಡುವೆ ಪರಸ್ಪರ ಡಿಕ್ಕಿಯಾಗಿ 2 ಕಾರುಗಳು ಜಖಂಗೊಂಡಿರುತ್ತದೆ. ಆಲ್ಟೊ ಕಾರು ಚಾಲಕ ವಿನೋದ್ ಎಂಬವರ ತಲೆಗೆ ಗಾಯವಾಗಿದ್ದು, ಅವರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೋರ್ವ ಕಾರಿನ ಚಾಲಕ ಜಾಹೀರ್ ಎಂಬವರಿಗೆ ಯಾವುದೇ ಗಾಯವಾಗಿರುವುದಿಲ್ಲ ಎನ್ನಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಶ್ರೀನಿವಾಸ್, ಸಿಬ್ಬಂದಿಗಳಾದ ಪ್ರಥ್ಯು, ಮಲ್ಲಪ್ಪ, ಮಗಶೀರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.