ಮಡಿಕೇರಿ, ಮಾ. 19: ಮಾದಾಪಟ್ಟಣ ಪಾಲಿಟೆಕ್ನಿಕ್ ಬಳಿ ತಾ. 17 ರಂದು ರಸ್ತೆ ಬದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಸುಮಾರು 65-75 ವರ್ಷದ ಅಪರಿಚಿತ ಗಂಡಸಿನ ಮೃತ ದೇಹವಾಗಿದ್ದು, ಭಿಕ್ಷುಕನಂತೆ ಕಂಡುಬರುತ್ತಿದ್ದು, ಮೃತ ಶರೀರವನ್ನು ಪರಿಶೀಲಿಸಲಾಗಿ ಕೈ ಕಾಲಿನಲ್ಲಿ ಅಲ್ಲಲ್ಲಿ ಬಿದ್ದು, ತರಚಿದ ಗಾಯವಾಗಿದ್ದು, ನಂತರ ಒಂದು ಗೂಡ್ಸ್ ಆಟೋ ರಿಕ್ಷಾದಲ್ಲಿ ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ ಕುಶಾಲಪ್ಪ ಎ.ಎಸ್.ಐ., ಹೋಂ ಗಾರ್ಡ್ ಧನುಪೂಜಾರಿ ಹಾಗೂ ಆಟೋ ಚಾಲಕ ಮುನೀರ್ ಹಾಗೂ ಅವರೊಂದಿಗೆ ಬಂದಿದ್ದ ರೆಹಮಾನ್ ಅವರ ಸಹಾಯದಿಂದ ಮೃತ ಶರೀರವನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ತಂದು ಶವಾಗಾರದಲ್ಲಿ ಇರಿಸಲಾಗಿದೆ.

ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. 06/2020 ವಿಧಿ 174 (3) (4) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಅಪರಿಚಿತ ಮೃತ ಗಂಡಸಿನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕುಶಾಲನಗರ ಪಟ್ಟಣ ಠಾಣೆಗೆ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ತಿಳಿಸಲು ಈ ಮೂಲಕ ಕೋರಲಾಗಿದೆ. ಪಿ.ಎಸ್.ಐ. 9480804951, ಕುಶಾಲನಗರ ಟೌನ್ ಪೊಲೀಸ್ ಠಾಣೆ 08276-274333 / ಕಂಟ್ರೋಲ್ ರೂಂ ಮಡಿಕೇರಿ: 08272 228330.