ಮಡಿಕೇರಿ, ಮಾ. 17: ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆಗೆ ತುತ್ತಾಗಿರುವ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುವದೆಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಆನಂದ್ ಸಿಂಗ್ ಭರವಸೆ ನೀಡಿದ್ದಾರೆ.ವನ್ಯಪ್ರಾಣಿಗಳ ಹಾವಳಿ ಸಮಸ್ಯೆಗೆ ತುತ್ತಾದ ಪ್ರದೇಶಗಳ ಜನಪ್ರತಿನಿಧಿ ಗಳೊಂದಿಗಿನ ಸಭೆ ಇಂದು ವಿಕಾಸ ಸೌಧದಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಶಾಸಕರು ಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಜಿಲ್ಲೆಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಅರಣ್ಯದಲ್ಲಿ ಕಾಡಾನೆಗಳಿಗೆ ಮೇವು ಒದಗಿಸುವ ಹಲಸು, ಮಾವು, ಅತ್ತಿ, ಗೋಳಿ ಮರಗಳು ಹಾಗೂ ಬಿದಿರನ್ನು ನೆಡಬೇಕು. ಕುಡಿಯಲು ನೀರಿಗಾಗಿ ತೊಟ್ಟಿಗಳನ್ನು ನಿರ್ಮಿಸಬೇಕು. ಅಲ್ಲದೆ, ಆನೆ ಕಂದಕಗಳ ಸಮರ್ಪಕ ನಿರ್ವಹಣೆ ಆಗಬೇಕು, ಕಂದಕದ ಬಳಿ ಯಲ್ಲಿ ಇಲಾಖೆ ವಾಹನ ಸಂಚರಿಸಲು ರಸ್ತೆ ನಿರ್ಮಿಸಿದರೆ; ಆನೆಗಳು ನುಸುಳುವ ಸ್ಥಳಗಳ ಬಗ್ಗೆ ಮಾಹಿತಿ ಸಿಗಲಿದೆ. ರೈಲ್ವೇ ಕಂಬಿಗಳನ್ನು ಅಳ ವಡಿಸಬೇಕು. ಹೀಗೆ ಮಾಡಿದರೆ ಆನೆಗಳು ನಾಡಿಗೆ ಲಗ್ಗೆ ಯಿಡುವದಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಗಮನ ಸೆಳೆದರು. ಅಲ್ಲದೆ ನಷ್ಟಕ್ಕೊಳ ಗಾದ ರೈತರ ಬೆಳೆಗಳಿಗೆ ಮಾರುಕಟ್ಟೆ ಯಲ್ಲಿರುವ ದರದಷ್ಟೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ಆಯಾಯ ಜಿಲ್ಲಾ ಕೇಂದ್ರ ಗಳಲ್ಲಿ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ತೀರ್ಮಾನ ಕೈಗೊಳ್ಳುವ ದಾಗಿ ಹೇಳಿದರು. ಶಾಸಕ ಕೆ.ಜಿ. ಬೋಪಯ್ಯ ಅವರು ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಗರಹೊಳೆಯ ದೇಮಚ್ಚಿ ಪ್ರದೇಶವನ್ನು ಸೇರ್ಪಡೆ ಗೊಳಿಸಲಾಗಿದೆ. ಆ ಪ್ರದೇಶದಲ್ಲಿ ಜನವಸತಿ ಇದ್ದು; ಈ ಬಗ್ಗೆ ಪುನರ್ ಪರಿಶೀಲಿಸ ುವಂತೆ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲಿ ಸುವದಾಗಿ ಸಚಿವರು ಪ್ರತಿಕ್ರಿಯಿಸಿದರು. ಇತರ ಜಿಲ್ಲೆಗಳ ಶಾಸಕರುಗಳು ಕೂಡ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ತಕರಾರು ಮಾಡುತ್ತಿರುವ ಬಗ್ಗೆ ಗಮನ ಸೆಳೆದರು.