ಮಡಿಕೇರಿ, ಮಾ. 17 : ಜಿಲ್ಲಾ ಪಂಚಾಯತ್ 3 ನೇ ಹಾಗೂ ಕೊನೆಯ ಅವಧಿಗೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.ನಗರದ ಜಿ.ಪಂ.ನೂತನ ಸಭಾಂಗಣದಲ್ಲಿ ನಡೆದ ಆಯ್ಕೆ ಸಂದರ್ಭದಲ್ಲಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಭಾಗಮಂಡಲ ಕ್ಷೇತ್ರದ ಕವಿತಾ ಪ್ರಭಾಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಬಿಟ್ಟಂಗಾಲ ಕ್ಷೇತ್ರದ ಅಪ್ಪಂಡೇರಂಡ ಭವ್ಯ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೂಡಿಗೆ ಕ್ಷೇತ್ರದ ಮಂಜುಳ ಕೆ.ಆರ್. ಅವರು ಆಯ್ಕೆಯಾಗಿದ್ದಾರೆ.ಜಿಲ್ಲಾ ಪಂಚಾಯತ್‍ನ 3ನೇ ಅವಧಿಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ವಿವರ ಇಂತಿದೆ. ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಜಿ.ಪಂ. ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಎನ್.ಟಿ. ಕಿರಣ್ ಕಾರ್ಯಪ್ಪ, ಶ್ರೀನಿವಾಸ್, ದೀಪಕ್ ಬಿ.ಜೆ., ಕಲಾವತಿ ಬಿ.ಪಿ., ಯಾಲದಾಳು ಪದ್ಮಾವತಿ ಮತ್ತು ಶ್ರೀಜ ಸಾಜಿ. ಸಾಮಾನ್ಯ ಸ್ಥಾಯಿ ಸಮಿತಿಗೆ ಜಿ.ಪಂ. ಉಪಾಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಮೂಕೊಂಡ ವಿಜು ಸುಬ್ರಮಣಿ, ಸಿ.ಕೆ. ಬೋಪಣ್ಣ, ಎ.ಬಿ. ಸುನಿತಾ, ಕೆ.ಕೆ. ಕುಮಾರ್, ಎಂ.ಬಿ. ಮಾದಪ್ಪ ಮತ್ತು ಕೆ.ಪಿ. ಚಂದ್ರಕಲಾ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕವಿತಾ ಪ್ರಭಾಕರ್, ಸಿ.ಕೆ. ಬೋಪಣ್ಣ, ಬಿ.ಜೆ. ದೀಪಕ್, ಸರೋಜಮ್ಮ, ಮುರಳಿ ಕರುಂಬಮ್ಮಯ್ಯ, ಲೀಲಾವತಿ ಮತ್ತು ಬಾನಂಡ ಎನ್.ಪ್ರತ್ಯು ಅವರು ಆಯ್ಕೆಯಾಗಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ

(ಮೊದಲ ಪುಟದಿಂದ) ಅಧ್ಯಕ್ಷರಾಗಿ ಅಪ್ಪಂಡೇರಂಡ ಭವ್ಯ, ಸದಸ್ಯರಾಗಿ ಮೂಕೊಂಡ ಪಿ.ಸುಬ್ರಮಣಿ (ಶಶಿ), ಪೂರ್ಣಿಮ ಗೋಪಾಲ್, ಎನ್.ಟಿ. ಕಿರಣ್ ಕಾರ್ಯಪ್ಪ, ಪಿ.ಆರ್.ಪಂಕಜ, ಲತೀಫ್ ಮತ್ತು ಕುಮುದಾ ಧರ್ಮಪ್ಪ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ.ಆರ್. ಮಂಜುಳ, ಸದಸ್ಯರಾಗಿ ಮೂಕೊಂಡ ವಿಜು ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಮುರಳಿ ಕರುಂಬಮ್ಮಯ್ಯ, ಸರೋಜಮ್ಮ, ಸಿ.ಪಿ. ಪುಟ್ಟರಾಜು ಮತ್ತು ಕೆ.ಪಿ.ಸರಿತಾ ಪೂಣಚ್ಚ.