ಸಿದ್ದಾಪುರ, ಮಾ. 17: ಸಿದ್ದಾಪುರದಲ್ಲಿ ಓ.ಡಿ.ಪಿ. ಹಾಗೂ ನಬಾರ್ಡ್ ಸಂಸ್ಥೆಯ ಸಹಬಾಗಿತ್ವದಲ್ಲಿ ನಡೆಸಿದ ಫ್ಯಾಶನ್ ಡಿಸೈನಿಂಗ್ ತರಬೇತಿಯ ಮುಕ್ತಾಯ ಸಮಾರಂಭ ಹಾಗೂ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಿದ್ದಾಪುರದ ಎಂ.ಜಿ. ರಸ್ತೆಯ ಅಂಗನವಾಡಿ ಬಳಿ ನಡೆಸಲಾಯಿತು.
ಓ.ಡಿ.ಪಿ. ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಾಯ್ಸ್ ಮೆನೆಜಸ್, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಸಿದ್ದಾಪುರದ ಪೊಲೀಸ್ ಸಿಬ್ಬಂದಿ ಮಲ್ಲಪ್ಪ ಮುಗಶೀರ್ ಮಾತನಾಡಿ ಓ.ಡಿ.ಪಿ. ಸಂಸ್ಥೆಯು ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಗ್ರಾ.ಪಂ ಸದಸ್ಯೆ ಎಂ.ಆರ್. ಪೂವಮ್ಮ ಉದ್ಘಾಟಿಸಿದರು. ಓ.ಡಿ.ಪಿ. ಸಂಸ್ಥೆ ಕಾರ್ಯಕರ್ತೆ ವಿಜಯ ನಾರಾಯಣ, ತರಬೇತಿ ಶಿಕ್ಷಕಿ ರಾಧಾ ಪವಿತ್ರ ಹಾಗೂ ಪೊಲೀಸ್ ಸಿಬ್ಬಂದಿ ಹಾಗೂ 33 ತರಬೇತಿ ಪಡೆದ ವಿದ್ಯಾರ್ಥಿಗಳು; ಆಶಾ ಕಾರ್ಯಕರ್ತರು ಹಾಜರಿದ್ದರು. ಲತಾ ಸ್ವಾಗತಿಸಿ, ಶ್ರೀನಾ ನಿರೂಪಿಸಿ, ಪುಷ್ಪ ವಂದಿಸಿದರು.