ನಾಪೆÇೀಕ್ಲು, ಮಾ. 17: ಜೀವನದಲ್ಲಿ ಮನುಷ್ಯನ ಹುಟ್ಟು ಎಲ್ಲಿ ಯಾವ ಸ್ಥಳದಲ್ಲಿ ಎಂದು ಬರೆದಿಲ್ಲ ಬದಲಾಗಿ ಮನುಷ್ಯ ಎಲ್ಲಿ ಬೇಕಾದರು ತಾನು ಹುಟ್ಟಬಹುದು ಎಂಬದಕ್ಕೆ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಸಾಕ್ಷಿಯಾಗಿದೆ. ಅಸ್ಸಾಂ ರಾಜ್ಯದಿಂದ ಕೂಲಿ ಅರಿಸಿ ಬಂದ ಬಷೀರ್‍ಅಲಿ ಮತ್ತು ಸಹಲಾನುಬಾನು ದಂಪತಿ ಸಮೀಪದ ನೆಲಜಿ ಗ್ರಾಮದ ತೋಟಒಂದರಲ್ಲಿ ಕಾರ್ಮಿಕರಾಗಿ ಸೇರಿಕೊಂಡಿದ್ದರು.

ಗರ್ಭಾವತಿಯಾಗಿ ಈಕೆಗೆ ತಾ. 16 ರಂದು ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಆಕೆಯನ್ನು ಆಟೋ ರಿಕ್ಷಾದಲ್ಲಿ ನಾಪೆÇೀಕ್ಲು ಸರಕಾರಿ ಆಸ್ವತ್ರೆಗೆ ಕರೆತರುವ ಸಂದರ್ಭ ದಾರಿ ಮಧ್ಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ತಾಯಿ ಮಗು ನಾಪೆÇೀಕ್ಲು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ. ಇಂತಹ ಸಂದರ್ಭ ಕೂಡಲೇ ಸ್ಪಂದಿಸಿದ ಆಟೋ ಚಾಲಕ ಶಂಷುದ್ದೀನ್‍ರನ್ನು ನಾಡಿನ ಜನರು ಅಭಿನಂದಿಸಿದ್ದಾರೆ.