ಶನಿವಾರಸಂತೆ, ಮಾ. 18: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೆಹಳ್ಳಿ ಗ್ರಾಮದ ನಿವಾಸಿ ನಿಂಗಯ್ಯ (60) ಎಂಬವರಿಗೆ ಗ್ರಾಮದ ರಸ್ತೆಯಲ್ಲಿ ನಿನ್ನೆ ದಿನ ವಾಹನವೊಂದು ಡಿಕ್ಕಿಯಾಗಿದ್ದು; ಚಾಲಕ ವಾಹನ ದೊಂದಿಗೆ ಪರಾರಿಯಾಗಿದ್ದಾನೆ.

ನಿಂಗಯ್ಯ ಅವರ ತಲೆಗೆ ಗಾಯವಾಗಿತ್ತು. ಗಾಯಾಳುವನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು; ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸೋಮವಾರಪೇಟೆ ಸರಕಾರಿ ಆಸ್ಪತ್ರತೆಗೆ ಕೊಂಡೊಯ್ಯ ಲಾಯಿತಾದರೂ ಅಷ್ಟರಾಗಲೇ ಅವರು ಮೃತಪಟ್ಟಿದ್ದರು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.