ಶನಿವಾರಸಂತೆ, ಮಾ. 17: ಕೊಡಗು ಜಿಲ್ಲಾ ವಕ್ಛ್ ಬೋರ್ಡ್ ಅಧ್ಯಕ್ಷರಾದ ಕೆ.ಎ. ಯಾಕೂಬ್ ಅವರಿಗೆ ಶನಿವಾರಸಂತೆ ಜಾಮೀಯಾ ಮಸೀದಿ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ಯಾಕೂಬ್ ಶನಿವಾರಸಂತೆ ಮಸೀದಿಯ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಸನ್ಮಾನ ಸಭೆಯ ಅಧ್ಯಕ್ಷತೆಯನ್ನು ಮಸೀದಿ ಸಮಿತಿ ಅಧ್ಯಕ್ಷ ಕೆ.ಎಂ. ಅಮೀರ್ ಸಾಬ್ ವಹಿಸಿದ್ದರು.

ಸಭೆಯಲ್ಲಿ ಉಪಾಧ್ಯಕ್ಷ ಶಾಹಿದ್, ಕಾರ್ಯದರ್ಶಿ ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷ ಅಕ್ಮಲ್ ಪಾಶಾ, ಪ್ರಮುಖರಾದ ಎಂ.ಎ. ಆದಿಲ್‍ಪಾಶ, ಸೈಯದ್ ಅಹಮ್ಮದ್, ನಿಸಾರ್ ಅಹಮ್ಮದ್, ತಾರೀಖ್, ಅಜೀಜ್ ಖಾನ್, ಸರ್ದಾರ್ ಅಹಮ್ಮದ್, ಸಮೀರ್, ಹನೀಫ್, ಬುಡೇನ್, ಮಹಮ್ಮದ್ ಪಾಶಾ, ಉತ್‍ಫುಲ್ಲಾ, ಅನ್ವರ್ ಸಾಬ್, ದಸ್ತಗೀರ್, ಹನಸೆಜಬ್ಬಾರ್, ವಾಹಿದ್ ಇತರರು ಹಾಜರಿದ್ದರು.

ಮುಖಂಡ ಎಂ.ಎ. ಆದಿಲ್ ಪಾಶ ಸ್ವಾಗತಿಸಿ, ನಿರೂಪಿಸಿದರು. ಅಬ್ದುಲ್ ಶುಕೂರ್ ವಂದಿಸಿದರು.