ಸುಂಟಿಕೊಪ್ಪ, ಮಾ. 18: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.
ಅಂಗನವಾಡಿ ಕಾರ್ಯಕರ್ತೆ ಯರಾದ ಎಸ್.ಎನ್. ಸಾವಿತ್ರಿ ಕೊರೊನಾ ವೈರಸ್ ಬಗ್ಗೆ ಜನರಿಗೆ ಮಾಹಿತಿ ನೀಡಿ ಸ್ವಚ್ಛತೆ ಕಾಪಾಡಬೇಕೆಂದು ಹೇಳಿದರು.
ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್, ಗ್ರಾ.ಪಂ. ಕಾರ್ಯದರ್ಶಿ ಸುಕುಮಾರ್, ಆರೋಗ್ಯ ಕಾರ್ಯಕರ್ತೆ ಸಿ.ಎ. ಪ್ರಮೀಳಾ, ಪಂಚಾಯಿತಿ ಸಹಾಯಕರಾದ ಧನಂಜಯ, ಧನ್ಯ, ಆಶಾ ಕಾರ್ಯಕರ್ತೆಯರಾದ ಕವಿತಾ ಮತ್ತು ನೀತಾ ಉಪಸ್ಥಿತರಿದ್ದರು.