ಗೋಣಿಕೊಪ್ಪ ವರದಿ, ಮಾ. 16: ಆನೆಚೌಕೂರು ವನ್ಯಜೀವಿ ವಲಯ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಆನೆಚೌಕೂರು ಗೇಟ್‍ನಿಂದ ಮಜ್ಜಿಗೆಹಳ್ಳವರೆಗಿನ ಹೆದ್ದಾರಿ ಬದಿಯಲ್ಲಿ ಆಯೋಜಿಸಿದ್ದ ಶ್ರಮದಾನದಲ್ಲಿ ಸುಮಾರು 120 ಚೀಲ ಕಸ ಸಂಗ್ರಹಿಸಲಾಯಿತು.
ಹುಣಸೂರು ಮತ್ತು ಆನೆಚೌಕೂರು ವನ್ಯಜೀವಿ ವಲಯ, ಹುಲಿ ಯೋಜನೆ ಸಿಬ್ಬಂದಿ ಸೇರಿ ಸುಮಾರು 250 ಜನರಿಂದ ಶ್ರಮದಾನ ನಡೆಯಿತು.
ಇದರೊಂದಿಗೆ ಕಾರೆಕಂಡಿ ಹಾಡಿ, ಮಜ್ಜಿಗೆಹಳ್ಳ ಹಾಡಿ, ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಕಸ ಎಸೆಯದಂತೆ ಮನವಿ ಮಾಡಿಕೊಡಲಾಯಿತು. ಚಕ್ರಪಾಣಿ ಹಾಗೂ ತಂಡದವರಿಂದ ಗಿರಿಜನ ಶಾಲೆ ಮತ್ತು ಆನೆಚೌಕೂರು-ತಿತಿಮತಿ ಹೆದ್ದಾರಿಯಲ್ಲಿ ಬೀದಿ ನಾಟಕದ ಮೂಲಕ ಸ್ವಚ್ಛತೆ ಅರಿವು ಮೂಡಿಸಲಾಯಿತು.
ಸ್ಥಳೀಯರೊಂದಿಗೆ ಡಿಆರ್‍ಎಫ್‍ಒ ಅಧಿಕಾರಿಗಳಾದ ಶಿವಲಿಂಗಯ್ಯ, ಸತೀಶ್, ಯೋಗೇಶ್ವರಿ, ಉಮಾಶಂಕರ್, ನವೀನ್, ಸುದೀಪ್, ಶಶಿ, ಶಿವಪ್ರಸಾದ್, ಅರಣ್ಯ ಮಹಾವಿದ್ಯಾಲಯ ಪ್ರಾಧ್ಯಾಪಕ ಅನಿಲ್ ಕಪ್ಲೆ, ಪಲ್ಲವಿ ಅರಿವು ಮೂಡಿಸಿದರು.
ನಾಗರಹೊಳೆ ಉದ್ಯಾನವನ ನಿರ್ದೇಶಕ ಮಹೇಶ್‍ಕುಮಾರ್, ಎಸಿಎಫ್ ಪ್ರಸನ್ನಕುಮಾರ್, ನಿರ್ದೇಶನದಂತೆ ಶ್ರಮದಾನದಲ್ಲಿ ಆನೆಚೌಕೂರು ಆರ್‍ಎಫ್‍ಒ ಶಿವಾನಂದ್ ನಿಂಗಣಿ, ಹುಣಸೂರು ಆರ್‍ಎಫ್‍ಒ ಹನುಮಂತ್ ರಾಜು, ತಿತಿಮತಿ ಆರ್‍ಎಫ್‍ಒ ಅಶೋಕ್ ಹುನುಗುಂದ ಇದ್ದರು.