ಸುಂಟಿಕೊಪ್ಪ, ಮಾ. 16: ಇಲ್ಲಿನ ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಲ್ಲೂರು ಗ್ರಾಮದಲ್ಲಿ ದನದ ದೊಡ್ಡಿಯೊಂದು ಇದ್ದು ಇಲ್ಲಿಗೆ ಸೇರಿಸುವ ದನಗಳ ಶುಲ್ಕದ ಹಣವನ್ನು ನಕಲಿ ರಸೀದಿ ಮೂಲಕ ವಸೂಲಿ ಮಾಡುತ್ತಿದ್ದಾರೆ ಎಂದು ಅದೇ ಗ್ರಾಮದ ನಡೇಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಲ್ಲೂರು ಗ್ರಾಮದಲ್ಲಿ 190 ಸರ್ವೆ ನಂಬರಿನಲ್ಲಿ ಸರಕಾರಿ ಎಡಚ್ಚಯ್ಯನ ಕೆರೆಯೊಂದಿದ್ದು; ಈ ಕೆÀರೆಗೆ ಗ್ರಾಮದ ಗೋವುಗಳು ನೀರು ಕುಡಿಯಲು ಹೋದಾಗ ಅದನ್ನು ಹಿಡಿದು ದೊಡ್ಡಿಗೆ ಹಾಕುತ್ತಿದ್ದು ಇದನ್ನು ಬಿಡಿಸಲು ಹೋದಾಗ ವ್ಯಕ್ತಿಯೊಬ್ಬರು 1 ಗೋವಿಗೆ 150 ರೂ. ಗಳಂತೆ ಸುಮಾರು 56 ಜನರಿಗೆ ಪಂಚಾಯಿತಿ ಮುದ್ರೆ ಇಲ್ಲದ ನಕಲಿ ರಸೀದಿ ನೀಡಿ ಹಣ ಪಡೆದಿದ್ದಾರೆ. ಈ ಬಗ್ಗೆ ಗ್ರಾ.ಪಂ.ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಅಲ್ಲದೆ ಸರಕಾರಿ ಕೆರೆ ಒತ್ತುವರಿಯಾಗಿದ್ದು; ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ನಡೇಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.