ಗೋಣಿಕೊಪ್ಪಲು, ಮಾ. 15: ದ.ಕೊಡಗಿನ ಬಾಳೆಲೆ ಹೋಬಳಿ ಸುಳುಗೋಡುವಿನಲ್ಲಿ ಶನಿವಾರ ಸಂಜೆ ಸೆರೆಯಾಗಿದ್ದ ಹುಲಿ ಕೊನೆಗೂ ಉಳಿಯಲಿಲ್ಲ. ಡಾಕ್ಟರ್ ಮುಜಿಬ್ ಮುಂದಾಳತ್ವದ ಮೈಸೂರು ಮೃಗಾಲಯದ ಮೂವರು ವೈದ್ಯರು ಸತತ ಚಿಕಿತ್ಸೆ ನೀಡಿದರೂ ಹುಲಿ ಮಾತ್ರ ಚೇತರಿಸಿಕೊಳ್ಳದೆ ಭಾನುವಾರ ಮೃತಪಟ್ಟಿತು.ತೀವ್ರ ಸ್ವರೂಪದ ಸೋಂಕು ತಗುಲಿದ ಪರಿಣಾಮ ಹುಲಿಯು ನಿತ್ರಾಣಗೊಂಡಿತ್ತು. ಸಮಾರೋಪಾದಿ ಯಲ್ಲಿ ವ್ಯೆದ್ಯರು ಚಿಕಿತ್ಸೆ ನೀಡಿದರಾದರೂ ಯಾವುದೇ ಫಲ ನೀಡಲಿಲ್ಲ. ಇದರಿಂದಾಗಿ ವೈದ್ಯರುಗಳು ಮರಣೋತ್ತರ ಪರೀಕ್ಷೆ ನಡೆಸಿ ಹುಲಿಯ ಅಂಗಾಂಶಗಳನ್ನು ತೆಗೆದು (ಮೊದಲ ಪುಟದಿಂದ) ಸಾವಿಗೆ ನಿಖರವಾದ ಮಾಹಿತಿ ಪಡೆಯಲು ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ ಎಂದು ‘ಶಕ್ತಿ’ಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.ಸುಳುಗೋಡುವಿನಲ್ಲಿ ಶನಿವಾರ ಹುಲಿ ಸೆರೆಯಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಹಿರಿಯ ಅಧಿಕಾರಿಗಳು ಹಾಗೂ ವ್ಯೆದ್ಯರ ತಂಡ ಸತತ ಆರು ಗಂಟೆ ಕಾರ್ಯಚರಣೆ ನಡೆಸಿ ಹುಲಿಯನ್ನು ಸೆರೆಹಿಡಿಯ ಲಾಗಿತ್ತು. ಪಾಸುರ ಕಾಶಿ ಕಾರ್ಯಪ್ಪ ಎಂಬವರು ತಮ್ಮ ಹಸುವನ್ನು ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ. ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ತೆರಳಿದ್ದಾಗ ಕೆರೆಯಲ್ಲಿ ಹುಲಿ ನೀರು ಕುಡಿಯುತ್ತಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

- ಹೆಚ್.ಕೆ.ಜಗದೀಶ್