ನಾಪೋಕ್ಲು, ಮಾ. 15: ನಾಪೋಕ್ಲು ಸಮೀಪದ ಬೇತು ಗ್ರಾಮದ ಪಾತಂಡ ಕುಟುಂಬಸ್ಥರ ಐನ್‍ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಪಾತಂಡ ಕುಟುಂಬದಲ್ಲಿ ಈಚೆಗೆ ಜರುಗಿದ ವಿವಿಧ ಕೋಲಗಳ ಕಾರ್ಯಕ್ರಮದ ಬಳಿಕ ನಡೆದ ಸಮಾರಂಭದಲ್ಲಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡ ಅವರನ್ನು ಕುಟುಂಬಸ್ಥರ ಪರವಾಗಿ ಪಟ್ಟೇದಾರ ಪಾತಂಡ ಪೂವಪ್ಪ ಸನ್ಮಾನಿಸಿದರು.