ಪಾಲಿಬೆಟ್ಟ, ಮಾ. 15: ಪಾಲಿಬೆಟ್ಟ ಚೆಶೈರ್ ಹೋಂ ವಿಶೇಷಚೇತನರ ಶಾಲೆಯ 20ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ನೃತ್ಯ ಕಾರ್ಯಕ್ರಮ ನೆರವೇರಿತು.

ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ನಾಟಕ, ನೃತ್ಯ, ಪರಿಸರ ಜಾಗೃತಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚಂಗಪ್ಪ ಮಾತನಾಡಿ; ವಿಶೇಷಚೇತನರ ಶಾಲೆಯಲ್ಲಿ ವಿವಿಧ ಕೌಶಲ್ಯ ತರಬೇತಿಯೊಂದಿಗೆ ವಿದ್ಯಾರ್ಥಿಗಳು ಗುರುತಿಸಿಕೊಂಡಿ ದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಚೇತನರ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಪಾಲಿಬೆಟ್ಟದ ರಂಶಾದ್. ರಾಜ್ಯ-ರಾಷ್ಟ್ರ ಅಂತರ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ವಿವಿಧ ಕ್ರೀಡೆಗಳಲ್ಲಿ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅಲ್ಲದೆ ವಿದ್ಯಾರ್ಥಿಗಳಾದ ನವಾಜ್ ಹಾಗೂ ವೀರಮ್ಮ, ಶಾಲೆಯಲ್ಲಿ ಕಲಿತು ವೃತ್ತಿಜೀವನದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿರುವುದು ಗಮನಿಸಿ ಗೌರವಿಸಲಾಯಿತು.

ಡಾ. ರಾಧಾ ಸಿಂಹಾದ್ರಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪುನೀತ ರಾಮಸ್ವಾಮಿ, ಖಜಾಂಜಿ ಮುತ್ತು ಬಿದ್ದಪ್ಪ, ಗೌರವ ಕಾರ್ಯದರ್ಶಿ ಆಶಾ ಸುಬ್ಬಯ್ಯ, ಶಾಲಾ ಮುಖ್ಯ ಶಿಕ್ಷಕ ಶಿವರಾಜ್, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಶಿಕ್ಷಣ ಇಲಾಖೆಯ ಕರುಂಬಯ್ಯ, ಅಜಿತಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು ಭಾಗವಹಿಸಿದ್ದರು. ಪಂಚು ಬೆಳ್ಳಿಯಪ್ಪ ಹಾಗೂ ಗೀತಾ ನಾಯ್ಡು ಕಾರ್ಯಕ್ರಮ ನಿರೂಪಿಸಿದರು.