ಮಡಿಕೇರಿ, ಮಾ. 15: ಕೊಡಗಿನಿಂದ ಉದ್ಯೋಗ ನಿಮಿತ್ತ ಬೇರೆ ಬೇರೆ ದೇಶಗಳಿಗೆ ಈ ಹಿಂದೆ ತೆರಳಿರುವ ಮಂದಿ; ಪ್ರಸ್ತುತ ಜಿಲ್ಲೆಗೆ ವಾಪಾಸಾಗಿದ್ದು; ಇಂತಹವರ ಮೇಲೆಯಷ್ಟೇ ಮುಂಜಾಗ್ರತಾ ದೃಷ್ಟಿಯಿಂದ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.ಜಿಲ್ಲೆಯಿಂದ ವಿದೇಶಗಳಿಗೆ ಮಡಿಕೇರಿ, ಮಾ. 15: ಕೊಡಗಿನಿಂದ ಉದ್ಯೋಗ ನಿಮಿತ್ತ ಬೇರೆ ಬೇರೆ ದೇಶಗಳಿಗೆ ಈ ಹಿಂದೆ ತೆರಳಿರುವ ಮಂದಿ; ಪ್ರಸ್ತುತ ಜಿಲ್ಲೆಗೆ ವಾಪಾಸಾಗಿದ್ದು; ಇಂತಹವರ ಮೇಲೆಯಷ್ಟೇ ಮುಂಜಾಗ್ರತಾ ದೃಷ್ಟಿಯಿಂದ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.ಜಿಲ್ಲೆಯಿಂದ ವಿದೇಶಗಳಿಗೆ ಮಡಿಕೇರಿ, ಮಾ. 15: ಕೊಡಗಿನಿಂದ ಉದ್ಯೋಗ ನಿಮಿತ್ತ ಬೇರೆ ಬೇರೆ ದೇಶಗಳಿಗೆ ಈ ಹಿಂದೆ ತೆರಳಿರುವ ಮಂದಿ; ಪ್ರಸ್ತುತ ಜಿಲ್ಲೆಗೆ ವಾಪಾಸಾಗಿದ್ದು; ಇಂತಹವರ ಮೇಲೆಯಷ್ಟೇ ಮುಂಜಾಗ್ರತಾ ದೃಷ್ಟಿಯಿಂದ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.ಜಿಲ್ಲೆಯಿಂದ ವಿದೇಶಗಳಿಗೆ ಆನೆಪಾರೆ ಎಂಬಲ್ಲಿನ ಇಬ್ಬರು ವ್ಯಕ್ತಿಗಳನ್ನು ಸೇರಿದಂತೆ 3 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು; ಅವರನ್ನು ಮತ್ತು (ಮೊದಲ ಪುಟದಿಂದ) ಅವರ ಕುಟುಂಬದ 3 ಜನ ಸದಸ್ಯರೂ ಸೇರಿ ಒಟ್ಟು 6 ಮಂದಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಲಾಗಿದೆ ಕುಟುಂಬ ಸದಸ್ಯರ ತಪಾಸಣೆ ಬಳಿಕ ಅವರಿಗೆ ಯಾವದೇ ತೊಂದರೆ ಇಲ್ಲದ್ದರಿಂದ ಅವರನ್ನು ಮನೆಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ದೃಶ್ಯ ಮಾದ್ಯಮ ಹಾಗೂ ಜಾಲತಾಣಗಳಲ್ಲಿ ರವಾನೆಯಾಗುತ್ತಿರುವ ಸುದ್ದಿ ಬಗ್ಗೆ ಗಮನಿಸಿರುವ ಜಿಲ್ಲಾಧಿಕಾರಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಕೊಡಗಿನ ಜನತೆ ಆತಂಕಗೊಳ್ಳುವ ಅಗತ್ಯವಿಲ್ಲವೆಂದು; ಇದುವರೆಗೆ ನಿರ್ಧಿಷ್ಟವಾಗಿ ಕೊರೊನಾ ಸೋಂಕು ಯಾರಿಗೂ ಪತ್ತೆಯಾಗಿಲ್ಲವೆಂದು ನೆನಪಿಸಿದ್ದಾರೆ.

ಆರೋಗ್ಯಾಧಿಕಾರಿ ಸ್ಪಷ್ಟನೆ : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್ ಅವರನ್ನು ಸಂಪರ್ಕಿಸಿದಾಗ; ದೇಶ - ವಿದೇಶಗಳಿಂದ ಬರುವವರ ಮೇಲೆ ಸರಕಾರ ನಿಗಾ ಇರಿಸಲು ನಿರ್ದೇಶಿಸಿರುವ ಮೇರೆಗೆ; ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದ್ದು; ಸೋಂಕು ಪತ್ತೆಯಾಗಿಲ್ಲವೆಂದು ದೃಢಪಡಿಸಿದ್ದಾರೆ.

ಜನತೆಯಲ್ಲಿ ಆತಂಕ: ಕಳೆದ ಕೆಲವು ದಿನಗಳಿಂದ ದುಬೈ, ಅಬುದಾಬಿ, ಸೌದಿ ಅರೇಬಿಯಾ, ಇರಾನ್, ಗಲ್ಫ್‍ನಿಂದ ಅನೇಕರು ಕೊಡಗಿಗೆ ವಾಪಾಸ್ಸಾಗುತ್ತಿದ್ದು; ಇಂತಹವರಿಂದ ಕೊರೊನಾ ಸೋಂಕಿತ ಭೀತಿಯಲ್ಲಿ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ.

ಜಿ.ಪಂ. ಅಧ್ಯಕ್ಷ ಮನವಿ : ಕೊರೊನಾ ಭೀತಿ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು; ಜನತೆ ಯಾವದೇ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದ್ದಾರೆ. ಯಾರಿಗಾದರೂ ಸಂಶಯಗಳಿದ್ದಲ್ಲಿ ಸರಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವಂತೆ ಕೋರಿದ್ದಾರೆ.

ಕೊಡಗು ಅಘೋಷಿತ ಬಂದ್ : ಈಗಾಗಲೇ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವ ಪರಿಣಾಮವೆಂಬಂತೆ; ಸದಾ ಭಾನುವಾರಗಳಲ್ಲಿ ಗಿಜಿಗುಡುತ್ತಿದ್ದ ಕೊಡಗು ಇಂದು ಅಘೋಷಿತ ಬಂದ್ ರೀತಿ ಕಂಡು ಬಂತು. ಅಲ್ಲೊಂದು, ಇಲ್ಲೊಂದು ವ್ಯಾಪಾರೋದ್ಯಮ ಹೊರತು; ಬಹುತೇಕ ಎಲ್ಲೆಡೆ ಬೀಗ ಜಡಿದ ದೃಶ್ಯ ಗೋಚರಿಸಿತು; ಯಾವದೇ ವಾಹನಗಳ ಓಡಾಟ ಹಾಗೂ ಆಟೋರಿಕ್ಷಾ ಸಹಿತ ಖಾಸಗಿ ಮತ್ತು ಸರಕಾರಿ ಬಸ್ ಪ್ರಯಾಣಿಕರು ಕೂಡ ವಿರಳವಾಗಿತ್ತು. ಅಲ್ಲಿ ಇಲ್ಲಿ ಬೀದಿ ವ್ಯಾಪಾರಿಗಳು ಸಹ ವ್ಯಾಪಾರಿವಿಲ್ಲದೆ ಆತಂಕದ ನೋಟ ಹರಿಸಿದ್ದು; ಕಂಡು ಬಂತು. ಧಾರ್ಮಿಕ ಕೇಂದ್ರಗಳ ಸಹಿತ ಎಲ್ಲಿಯೂ ಜನಜಂಗುಳಿ ಕಂಡುಬರಲಿಲ್ಲ.

ಮಾಹಿತಿಗೆ ಆದೇಶ: ಕೊಡಗಿನ ರೆಸಾರ್ಟ್, ಹೋಂಸ್ಟೇ, ಲಾಡ್ಜ್‍ಗಳು ಸೇರಿದಂತೆ ವಿದೇಶಿ ಪ್ರವಾಸಿಗರು ತಂಗಿದ್ದರೆ; ಸಂಬಂಧಪಟ್ಟವರು ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆಯೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ಕೊಡಗಿನ ಹಿತದೃಷ್ಠಿ ಯಿಂದ ಪ್ರವಾಸೋದ್ಯ ಮದಲ್ಲಿ ತೊಡಗಿರುವವರು, ತಮ್ಮಲ್ಲಿ ಉಳಿದಿರುವ ಅತಿಥಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಅವರು ಸಲಹೆ ನೀಡಿದ್ದು; 8892494703 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಿದ್ದಾರೆ.

ವ್ಯಾಪಾರ ಕ್ಷೀಣ : ಭಾನುವಾರವಾದ ಇಂದು ಗೋಣಿಕೊಪ್ಪಲು, ಸುಂಟಿಕೊಪ್ಪ, ಸಿದ್ದಾಪುರ ಮುಂತಾದೆಡೆಗಳಲ್ಲಿ ಸಂತೆ ವ್ಯಾಪಾರ ಕೂಡ ಕ್ಷೀಣಗೊಂಡು ಕೈಬೆರಳೆಣಿಕೆ ವ್ಯಾಪಾರಿಗಳು ಗ್ರಾಹಕರಿಲ್ಲದೆ ಪರಿತಪಿಸುತ್ತಿದ್ದ ದೃಶ್ಯ ಎದುರಾಯಿತು.

ಸುಂಟಿಕೊಪ್ಪದಲ್ಲಿ ಪ್ರತಿಭಟನೆ

ಸುಂಟಿಕೊಪ್ಪದಲ್ಲಿ ತಾ.14 ರಂದು ಸಂಜೆ 5.30 ಗಂಟೆಗೆ ಗ್ರಾ.ಪಂ.ನಿಂದ ಭಾನುವಾರ ಸಂತೆ ವ್ಯಾಪಾರ ರದ್ದುಗೊಳಿಸಲಾಗಿದೆ. ವ್ಯಾಪಾರಸ್ಥರು ಗ್ರಾಹಕರು ಸಹಕರಿಸಬೇಕೆಂದು ಧ್ವನಿವರ್ಧಕದ ಮೂಲಕ ಜನರ ಗಮನ ಸಳೆಯಲಾಯಿತು. ಸಂತೆ ಬಂದ್ ಮಾಡಿದ್ದರ ಬಗ್ಗೆ ಮಾಹಿತಿ ಇಲ್ಲದೆ ಬಂದ ವ್ಯಾಪಾರಸ್ಥರಿಗೆ ತೊಂದರೆ ಉಂಟಾಯಿತು. ಮಾರುಕಟ್ಟೆಗೆ ಬಾಡಿಗೆ ವಾಹನದಲ್ಲಿ ತಂದಿದ್ದ ತರಕಾರಿ ದಿನಸಿ ಈರುಳ್ಳಿ ಪದಾರ್ಥಗಳನ್ನು ಇಳಿಸಲು ಮುಂದಾದಾಗ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸಿಬ್ಬಂದಿ ಇಂದು ಸಂತೆ ನಡೆಸುವಂತಿಲ್ಲ ಜಿಲ್ಲಾಧಿಕಾರಿಗಳ ಆದೇಶ ಇದೆ. ವಾಪಾಸ್ಸು ಸಾಮಗ್ರಿಗಳನ್ನು ಕೊಂಡ್ಯೊಯ್ಯುವಂತೆ ಹೇಳಿದರು.

ಇವರ ಮಾತಿಗೆ ವ್ಯಾಪಾರಸ್ಥರು ಕಿಮ್ಮತ್ತು ನೀಡದೆ ಕೂಲಿ ಕಾರ್ಮಿಕರ ಸಹಾಯದಿಂದ ಮಾರುಕಟ್ಟೆಗೆ ಮೊದಲೇ ಜೋಡಿಸಿಟ್ಟಿದ್ದ ಪರಿಕರಕ್ಕೆ ತರಕಾರಿ ಈರುಳ್ಳಿ ದಿನಸಿ ಪದಾರ್ಥಗಳನ್ನು ಸಾಗಿಸಲು ಮುಂದಾದಾಗ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಸಿಡಿಮಿಡಿಗೊಂಡು ನಮ್ಮ ಮಾತಿಗೆ ಬೆಲೆ ಇಲ್ಲವೇ ಕೂಡಲೇ ಸಾಮಗ್ರಿಗಳನ್ನು ವಾಪಾಸು ತೆಗೆದುಕೊಂಡು ಹೋಗಿ ಎಂದರು. ಠಾಣಾಧಿಕಾರಿ ಅವರೂ ವ್ಯಾಪಾರಸ್ಥ ರೊಂದಿಗೆ ಮಾತನಾಡು ವಾಗ ಬಳಸಬಾರದ ಶಬ್ಧ ಬಳಸಿದಾಗ ಸ್ಥಳೀಯ ಗ್ರಾಮಸ್ಥರು ಮುಗಿಬಿದ್ದು ಅಧ್ಯಕ್ಷೆ ಹಾಗೂ ಠಾಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿಯ ಟ್ರ್ಯಾಕ್ಟರ್ ಅನ್ನು ಸ್ಥಳಕ್ಕೆ ಕರೆಯಿಸಿ ವ್ಯಾಪಾರಸ್ಥರು ತಂದ ಸಾಮಗ್ರಿಗಳನ್ನು ಈ ಟ್ರ್ಯಾಕ್ಟರ್‍ನಲ್ಲಿ ತುಂಬಿಸಿ ಗುಂಡಿ ತೆಗೆದು ಮುಚ್ಚಿಸಲಾಗುವುದು ಎಂದು ಠಾಣಾಧಿಕಾರಿ ಬೆದರಿಕೆ ಹಾಕಿದರು. ಗ್ರಾ.ಪಂ.ಅಧ್ಯಕ್ಷರ ಸೂಚನೆಯಂತೆ ಟ್ರ್ಯಾಕ್ಟರ್ ತಂದು ನಿಲ್ಲಿಸಲಾಯಿತು. ಪೌರಕಾರ್ಮಿಕರು ವ್ಯಾಪಾರಸ್ಥರು ತಂದ ಸಾಮಗ್ರಿಗಳನ್ನು ಬಾಚಿ ತುಂಬಿಸಲು ಮುಂದಾದಾಗ ವ್ಯಾಪಾರಸ್ಥರು ಹಾಗೂ ಸ್ಥಳೀಯ ನಾಗರಿಕರು ಪ್ರತಿಭಟಿಸಿದರು. ಬಳಿಕ ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ಸೋಮವಾರಪೇಟೆ ಸಂತೆ ರದ್ದು

ಕೊರೊನ ವೈರಸ್ ಭೀತಿ ಹಿನ್ನೆಲೆ ತಾ. 16ರಂದು (ಇಂದು) ನಡೆಯಬೇಕಿದ್ದ ಸೋಮವಾರಪೇಟೆ ಸಂತೆ ರದ್ದುಪಡಿಸಲಾಗಿದೆ. ತಾಲೂಕು ತಹಶೀಲ್ದಾರ್ ಗೋವಿಂದರಾಜು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತಡೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದ್ದರೂ ಸಹ ಹೊರ ಭಾಗದಿಂದ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರು ಆಗಮಿಸಿದ್ದರಿಂದ, ಪಂಚಾಯಿತಿ ವತಿಯಿಂದ ಇದೀಗ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿದೆ. ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ತಡೆಯೊಡ್ಡಲಾಗಿದ್ದು, ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ ಎಂದು ಬೆಟ್ಟದಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ.

ಮಾರಕ ಕೊರೊನಾ ಸೋಂಕಿನಿಂದ ಪಾರಾಗಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಸ್ವಾಗತಾರ್ಹ. ಪ್ರವಾಸಿ ತಾಣಗಳನ್ನು ಬಂದ್ ಮಾಡಿರುವದರಿಂದ ಹೊರಭಾಗ ದಿಂದ ಪ್ರವಾಸಿಗರು ಆಗಮಿಸುತ್ತಿಲ್ಲ. ಹೋಂ ಸ್ಟೇ ಉದ್ಯಮವೂ ಸ್ಥಗಿತ ಗೊಂಡಿದೆ. ವೈರಸ್‍ನ ಭೀತಿಯಿಂದ ಸಾರ್ವಜನಿಕರು ಪಟ್ಟಣದತ್ತ ಬರುವದು ಕಡಿಮೆಯಾಗಿದೆ. ಇದರ ಪರಿಣಾಮ ಆಟೋಗಳಿಗೆ ಬಾಡಿಗೆಯೂ ಕಡಿಮೆಯಾಗಿದೆ. ಸಂತೆದಿನ ಹೆಚ್ಚಿನ ಬಾಡಿಗೆ ಸಿಗುತ್ತಿತ್ತು. ಆದರೆ ಈ ವಾರ ಸಂತೆಯೂ ಬಂದ್ ಆಗಿರುವದರಿಂದ ಆಟೋ ಚಾಲಕರಿಗೆ ಬಾಡಿಗೆಯ ಹೊಡೆತ ಬೀಳಲಿದೆ. ಆದರೂ ಸಮಾಜದ ಹಿತದೃಷ್ಟಿಯಿಂದ ಸರ್ಕಾರದ ಆದೇಶ ಪಾಲಿಸಲೇಬೇಕಿದೆ ಎಂದು ಆಟೋ ಚಾಲಕ ಎಸ್.ಆರ್. ರಾಜು ಅಭಿಪ್ರಾಯಿಸಿದ್ದಾರೆ.

ನಾಪೆÇೀಕ್ಲು: ನಾಪೆÇೀಕ್ಲು ಪಟ್ಟಣದಲ್ಲಿ ಸೋಮವಾರ ಸಂತೆಯು ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ನಡೆಯಲಿದೆ ಎಂದು ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಆದೇಶ ಹೊರಡಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸಂತೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಂತೆಯಲ್ಲಿ ಗುಂಪಿನಲ್ಲಿ ತೆರಳುವದನ್ನು ಸಂಪೂರ್ಣ ನಿಷೇಧಿಸಿದೆ. ತೆರೆದಿಟ್ಟ ತಿಂಡಿ ತಿನಿಸು, ಕತ್ತರಿಸಿದ ಹಣ್ಣು, ಪಾನಿಪೂರಿ, ಪಾಸ್ಟ್ ಫುಡ್ ಇತ್ಯಾದಿಗಳನ್ನು ಮಾರುವದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಾಂಸ ಮತ್ತು ಮೀನು ಮಳಿಗೆಗಳಲ್ಲಿ ತೆರೆದಿಟ್ಟು ಮಾರುವದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದ ಅವರು ತಿಳಿಸಿದ್ದಾರೆ.

ಗೋಣಿಕೊಪ್ಪಲು: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸಂತೆ ದಿನ ಭಾನುವಾರ ಮಾರುಕಟ್ಟೆ ಆವರಣದಲ್ಲಿ ಪರಿಶೀಲನೆ ನಡೆಸಿ ಸ್ವಚ್ಚತೆ ಕಾಪಾಡುವಂತೆ ಇಲ್ಲಿನ ವರ್ತಕರಿಗೆ ಸೂಚನೆ ನೀಡಿದರು.

ಬಸ್ ತಂಗುದಾಣದಲ್ಲಿ ಪಾನಮತ್ತರಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ವ್ಯಕ್ತಿಗಳಿಗೆ ಸೂಚನೆ ನೀಡಿ ಹೊರಕಳುಹಿಸಿದರು. ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾರಾಟದ ವಸ್ತುಗಳನ್ನು ಇಟ್ಟು ಪ್ರಯಾಣಿಕರಿಗೆ ತೊಂದರೆ ಮಾಡುತ್ತಿದ್ದವರನ್ನು ತೆರವು ಗೊಳಿಸಿದರು. ಕೆಲವು ಆಯ್ದ ಭಾಗಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡುವ ಮೂಲಕ ಸೊಳ್ಳೆ, ಇನ್ನಿತರ ಕ್ರಿಮಿಗಳ ನಾಶಪಡಿಸುವ ಪ್ರಯತ್ನ ನಡೆಸಿದರು. ಸಂಜೆಯ ವೇಳೆÀ ಪಾನಿಪುರಿ, ಕರಿದ ತಿಂಡಿಗಳು ಮಾರಾಟ ಮಾಡು ವವರಿಗೆ ನೋಟೀಸ್ ನೀಡಿ ಜಾಗೃತಿ ಮೂಡಿಸಿದರು.

ಸಂತೆ ದಿನ ಭಾನುವಾರ ಎಂದಿನಂತೆ ಸಂತೆ ನಡೆಯಿತು. ಮಾರುಕಟ್ಟೆ ಆವರಣದಲ್ಲಿ ಶುಚಿತ್ವ ಕಾಪಾಡುವ ಸಲುವಾಗಿ ಹಾಗೂ ರೋಗ ಹರಡದಂತೆ ಎಚ್ಚರಿಕೆ ವಹಿಸುವ ಸಲುವಾಗಿ ತೆರದ ಸ್ಥಳಗಳಲ್ಲಿ, ಬೀದಿ ಬದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡದಂತೆ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರು ಕೀರೆಹೊಳೆಯಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ನಗರದ ಹೊಟೇಲ್, ಬೇಕರಿಗಳಿಗೆ ಭೇಟಿ ನೀಡಿ ಶುಚಿತ್ವ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಅಧಿಕಾರಿಗಳಾದ ಶಿವಯ್ಯ, ನಾಗೇಂದ್ರ, ಪಂಚಾಯಿತಿ ಸಿಬ್ಬಂದಿ ಸುಬ್ರಮಣಿ ಇತರರು ಹಾಜರಿದ್ದರು.

ಖಾಸಗಿ ಹಾಗೂ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಕೊರೊನಾ ವೈರಸ್ ಭೀತಿ ಎದುರಾಗಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಲೇಬೇಕಾಗಿದೆ ವರ್ತಕರು ಸಹಕಾರ ನೀಡಬೇಕು ಎಂದು ಮನವರಿಕೆ ಮಾಡಿದರು. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಹಿರಿಯ ಹಾಗೂ ಕಿರಿಯ ಸಹಾಯಕಿಯರು ಜನನಿಬಿಡ ಪ್ರದೇಶದಲ್ಲಿ ಕೊರೊನಾ ವೈರಸ್ ಭೀತಿ ಬಗ್ಗೆ ಅರಿವು ಮೂಡಿಸಿದರು.