ಮಡಿಕೇರಿ, ಮಾ. 15: ಕೊಡಗು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಜಾಗ ಕಬಳಿಸಿರುವುದು ಕಂಡುಬಂದರೆ, ಆ ಬಗ್ಗೆ ಸಮಗ್ರ ಮಾಹಿತಿ ಪಡೆದು ಮುಂದಿನ ಒಂದು ತಿಂಗಳೊಳಗೆ ವರದಿ ನೀಡುವಂತೆ, ಕರ್ನಾಟಕ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದ ಉನ್ನತ ಸಮಿತಿ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿದೆ.ತಾ. 12 ರಂದು ರಾಜಧಾನಿಯ ವಿಧಾನಸೌಧ ಕೊಠಡಿಯಲ್ಲಿ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರಾವಾಡ ಸೇರಿದಂತೆ ಮಹಾನಗರಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಸರಕಾರಿ ಜಮೀನುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಟ್ಟಭದ್ರರು ಮಾರಾಟಗೊಳಿಸಿರುವುದು, ದಾನ ಪತ್ರಗಳಿಂದ ವಂಚಿಸಿರುವ ಪ್ರಕರಣ ಗಳನ್ನು ಬಯಲಿಗೆ ಎಳೆಯುವ ದಿಸೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.ಸಭೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರ ಹಾಗೂ ಗ್ರಾಮಾಂತರದಲ್ಲಿ ಬೃಹತ್ ಮಟ್ಟದ ಸರಕಾರಿ ಜಮೀನು ಅತಿಕ್ರಮಣದೊಂದಿಗೆ ಪರಭಾರೆ ಗೊಳಿಸಿರುವ ನಕಲಿ ದಾಖಲೆ ಸೃಷ್ಟಿ ದಂಧೆ ಕುರಿತು ಬಯಲಿಗೆ ಬಂದಿದೆ. ಈ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ವಿರುದ್ಧ ಜನಪ್ರತಿನಿಧಿ ಗಳ ಸಮಿತಿ ತೀವ್ರ ಅಸಮಾಧಾನ ಹೊರಗೆಡವಿದ್ದಾಗಿ ತಿಳಿದು ಬಂದಿದೆ.
ಬಹಳಷ್ಟು ಪ್ರಕರಣದಲ್ಲಿ ಸರಕಾರಿ ಮಾರಾಟಗೊಳಿಸಿರುವುದು, ದಾನ ಪತ್ರಗಳಿಂದ ವಂಚಿಸಿರುವ ಪ್ರಕರಣ ಗಳನ್ನು ಬಯಲಿಗೆ ಎಳೆಯುವ ದಿಸೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.
ಸಭೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರ ಹಾಗೂ ಗ್ರಾಮಾಂತರದಲ್ಲಿ ಬೃಹತ್ ಮಟ್ಟದ ಸರಕಾರಿ ಜಮೀನು ಅತಿಕ್ರಮಣದೊಂದಿಗೆ ಪರಭಾರೆ ಗೊಳಿಸಿರುವ ನಕಲಿ ದಾಖಲೆ ಸೃಷ್ಟಿ ದಂಧೆ ಕುರಿತು ಬಯಲಿಗೆ ಬಂದಿದೆ. ಈ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ವಿರುದ್ಧ ಜನಪ್ರತಿನಿಧಿ ಗಳ ಸಮಿತಿ ತೀವ್ರ ಅಸಮಾಧಾನ ಹೊರಗೆಡವಿದ್ದಾಗಿ ತಿಳಿದು ಬಂದಿದೆ.
ಬಹಳಷ್ಟು ಪ್ರಕರಣದಲ್ಲಿ ಸರಕಾರಿ ಎಂದು ಹೇಳಲಾಗುತ್ತಿದೆ.
ಸರಕಾರಕ್ಕೆ ವರದಿ: ಈ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರಲ್ಲದೆ, ಭೂ ಸಂರಕ್ಷಣಾ ಸಮಿತಿ ಸಂಬಂಧಿಸಿದವರಿಂದ ವರದಿ ಬಂದ ಬಳಿಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಆ ಮುಖಾಂತರ ಸರಕಾರಕ್ಕೆ ಸಲ್ಲಿಸುವುದಾಗಿ ಸೂಚ್ಯವಾಗಿ ನುಡಿದರು.
ತಾ. 12 ರ ಸಭೆಯಲ್ಲಿ ಸಂಬಂಧಿಸಿದ ಸಮಿತಿಯ ಸದಸ್ಯರಾಗಿರುವ ಎ.ಟಿ. ರಾಮಸ್ವಾಮಿ, ಅರಗ ಜ್ಞಾನೇಂದ್ರ, ಎಸ್.ಆರ್. ವಿಶ್ವನಾಥ್, ರಾಜಶೇಖರ್ ಪಾಟೀಲ್, ಕರ್ನಾಟಕ ಸರಕಾರದ ಕಂದಾಯ ಕಾರ್ಯದರ್ಶಿ ಸೇರಿದಂತೆ ಬಿಬಿಎಂಪಿ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರೆಂದು ಗೊತ್ತಾಗಿದೆ.