*ಗೋಣಿಕೊಪ್ಪಲು, ಮಾ. 13: ವೀರಾಜಪೇಟೆ ತಾಲೂಕು ಸಹಕಾರಿ ನೌಕರರ ಸಂಘದ ವತಿಯಿಂದ ಸಂತ್ರಸ್ತೆ ಮರಗೋಡಿನ ಬಿ.ಕೆ. ನವೀನಾ ಎಂಬವರಿಗೆ ರೂ. 20 ಸಾವಿರ ಸಹಾಯಧನ ನೀಡಲಾಯಿತು. ಸಂಘದ ಅಧ್ಯಕ್ಷ ಮಾಳೆಟೀರ ಎಸ್. ಕಾಳಯ್ಯ ಸಹಾಯ ಧನದ ಚೆಕ್ ವಿತರಿಸಿದರು.

ಆಗಸ್ಟ್‍ನಲ್ಲಿ ಬಿದ್ದ ಭಾರೀ ಮಳೆಗೆ ಮನೆ ಹಾಗೂ ಆಸ್ತಿ ಕಳೆದುಕೊಂಡಿದ್ದರು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬ ತೊಂದರೆಯಾಗಿತ್ತು. ಇದನ್ನು ಗಮನಿಸಿ ಧನಸಹಾಯ ನೀಡಲಾಯಿತು ಎಂದು ಕಾರ್ಯದರ್ಶಿ ನರಸಿಂಹ ಹೇಳಿದರು. ಉಪಾಧ್ಯಕ್ಷ ಮತ್ರಂಡ ಎಂ. ಉತ್ತಪ್ಪ, ಸಿಬ್ಬಂದಿ ಬಿ.ಎಸ್. ಸುಮಿತ್ರಾ ಹಾಜರಿದ್ದರು.