*ಗೋಣಿಕೊಪ್ಪಲು, ಮಾ. 13: ತಂಬಾಕು ಸೇವೆನೆಯಿಂದ ಆರೋಗ್ಯಕ್ಕೆ ಕುತ್ತು ಬರಲಿದೆ. ಕ್ಯಾನ್ಸರ್ ಮುಂತಾದ ಮಾರಕ ರೋಗ ಸಂಭವಿಸಿ ಮರಣ ಸಂಭವಿಸಲಿದೆ ಎಂಬ ಸಂದೇಶ ಸಾರುವ ಪೊನ್ನಂಪೇಟೆ ಅಂಬೇಡ್ಕರ್ ಕಲಾ ತಂಡದವರ ಬೀದಿ ನಾಟಕ ಇತ್ತೀಚೆಗೆ ತಿತಿಮತಿಯಲ್ಲಿ ಪರಿಣಾಮ ಕಾರಿಯಾಗಿ ಮೂಡಿಬಂತು.

ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ನಡೆದ ಜನಜಾಗೃತಿ ಬೀದಿ ನಾಟಕದಲ್ಲಿ ಕಲಾವಿದರಾದ ಗಿರೀಶ್, ನಿರ್ಮಲಾ, ಶರತ್‍ಕುಮಾರ್, ಪ್ರವೀಣ್ ಕುಮಾರ್, ಕಾಂತಿ, ಅಭಿಷೇಕ್, ನರೇಂದ್ರ, ಸತೀಶ್, ಭರತ್ ಉತ್ತಮವಾಗಿ ಅಭಿನಯಿಸಿದರು. ಹಾಡು, ನೃತ್ಯ, ತಾಳ ಆಕರ್ಷಕವಾಗಿದ್ದವು. ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯನ್ನು ಸಂಭಾಷಣೆ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಮೂರ್ನಾಡು, ಹಾಕತ್ತೂರು, ತೊಂಬತ್ತ್‍ಮನೆ, ವಾಲ್ನೂರು, ನಂಜರಾಯಪಟ್ಟಣ, ಗುಡ್ಡೆ ಹೊಸೂರು, ವೀರಾಜಪೇಟೆ ಸಿದ್ದಾಪುರ, ಮಾಲ್ದಾರೆ ಮೊದಲಾದ ಕಡೆ ಉತ್ತಮವಾಗಿ ಅಭಿನಯಿಸಲಾಯಿತು.