ಮಡಿಕೇರಿ, ಮಾ. 14: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೊನಾ ವೈರಾಣುವಿನ ಬಗ್ಗೆ ಜಾಗೃತಿ ಸಂದೇಶ ಜಾಥಾ ಆಯೋಜಿಸಲಾಗಿತ್ತು.

ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ರೋಟರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಜರುಗಿದ ಜಾಥಾಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಲೋಕೇಶ್ ಚಾಲನೆ ನೀಡಿದರಲ್ಲದೇ, ವಿಶ್ವವ್ಯಾಪಿ ಹಬ್ಬುತ್ತಿರುವ ಕೊರೊನಾ ವೈರಾಣುವಿನಿಂದ ಪಾರಾಗಲು ಪ್ರತಿಯೋರ್ವರು ಮುನ್ನೆಚ್ಚರಿಕೆಯಾಗಿ ಸ್ವಚ್ಛತೆ ಕಾಪಾಡುವುದು ಅಗತ್ಯ ಎಂದರು. ಕೊರೊನಾ ಬಗ್ಗೆ ಖಂಡಿತಾ ಆತಂಕ ಬೇಕಾಗಿಲ್ಲ. ಆದರೆ ಸೂಕ್ತ ಜಾಗೃತಿ ಅನಿವಾರ್ಯವೆಂದೂ ಡಾ. ಲೋಕೇಶ್ ಹೇಳಿದರು.

ಈ ಸಂದರ್ಭ ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ನಿರ್ದೇಶಕರುಗಳಾದ ಎಂ. ಈಶ್ವರ ಭಟ್, ಮೃಣಾಲಿನಿ, ಅನಿಲ್ ಕೃಷ್ಣಾನಿ, ಸವಿತಾ ಭಟ್, ಉಪನ್ಯಾಸಕಿ ಡಾ. ಅನುಪಮಾ, ಕಾಲೇಜಿನ ಪ್ರಾಂಶುಪಾಲರು, ರೋಟರ್ಯಾಕ್ಟ್ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.