ಗೋಣಿಕೊಪ್ಪಲು, ಮಾ.14: ಪೊನ್ನಂಪೇಟೆ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿರುವ ಹಿನೆÀ್ನಲೆಯಲ್ಲಿ ಪೊನ್ನಂಪೇಟೆಯ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್ನ ಸಭಾಂಗಣದಲ್ಲಿ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ಪೊನ್ನಂಪೇಟೆ ನಾಗರಿಕ ವೇದಿಕೆಯ ವತಿಯಿಂದ ಸಭೆ ಹೋರಾಟ ಸಮಿತಿಯ ಅಧ್ಯಕ್ಷ,ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸಮಿತಿಯ ಹಿರಿಯರು ಅನೇಕ ಸಲಹೆಗಳನ್ನು ನೀಡಿದರು. ಸಭೆಯನ್ನು (ಮೊದಲ ಪುಟದಿಂದ) ಉದ್ದೇಶಿಸಿ ಮಾತನಾಡಿದ ಸಿ.ಎಸ್. ಅರುಣ್ ಮಾಚಯ್ಯ ನಾಗರಿಕ ಹೋರಾಟ ಸಮಿತಿಯ ಸತತ ಪರಿಶ್ರಮ, ನಿಸ್ವಾರ್ಥ ಸೇವೆಯಿಂದ ಪೊನ್ನಂಪೇಟೆ ಹೊಸ ತಾಲೂಕು ರಚನೆ ಆಗಲು ಕಾರಣವಾಗಿದೆ. ದ.ಕೊಡಗಿನ 21 ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪಂಚಾಯ್ತಿಗಳು ಸಂಘ ಸಂಸ್ಥೆಗಳು ಸೇರಿದಂತೆ ಇನ್ನಿತರರು ಹೋರಾಟ ಸಮಿತಿಗೆ ನೀಡಿದ ಸಹಕಾರದಿಂದ ಜನಪ್ರತಿನಿಧಿಗಳ ಒತ್ತಾಸೆಯಿಂದ ತಾಲೂಕು ಮಂಜೂರಾಗಿದೆ. ಆದಷ್ಟು ಬೇಗನೆ ಹೊಸ ತಾಲೂಕಿನಲ್ಲಿ ಅಧಿಕಾರಿಗಳು ಸೇವೆ ಆರಂಭಿಸಲು ಉದ್ಘಾಟನಾ ಕಾರ್ಯಕ್ರಮವನ್ನು ರೂಪಿಸಬೇಕು. ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ನಾಗರಿಕರ ಸಹಕಾರ ಅತ್ಯಮೂಲ್ಯ ಎಂದರು. ಮಾಜಿ ಅರಣ್ಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ ಹೊಸ ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ ಹಿನೆÀ್ನಲೆಯಲ್ಲಿ ನೂತನ ತಾಲೂಕು ರಚನೆಯಾಗಿದೆ. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೆಗೌಡರ ಸಹಕಾರದಿಂದ ಇಂದು ಹೊಸ ತಾಲೂಕು ರಚನೆಯಾಗಲು ಕಾರಣವಾಗಿದೆ. ಸಮಾರಂಭದಲ್ಲಿ ಇವರನ್ನು ಆಹ್ವಾನಿಸಿ ಗೌರವಿಸುವುದರಿಂದ ಸಮಿತಿಯ ಗೌರವ ಹೆಚ್ಚಾಗಲಿದೆ ಎಂದರು. ಸಮಿತಿಯ ಹಿರಿಯರು ವಕೀಲ ಅಪ್ಪಚ್ಚು ಮಾತನಾಡಿ 2007ರಿಂದಲೇ ನಿರಂತರವಾಗಿ ಪತ್ರ ವ್ಯವಹಾರಗಳನ್ನು ನಡೆಸುವ ಮೂಲಕ ಹೊಸ ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿತ್ತು. ನಾಗರಿಕರ ಸಹಕಾರ ಜನಪ್ರತಿನಿಧಿಗಳ ಕಾಳಜಿ ಇಂದು ಫಲ ನೀಡಿದೆ. ಏಪ್ರಿಲ್ ತಿಂಗಳಿನಲ್ಲಿ ಹೊಸ ತಾಲೂಕು ರಚನೆಯ ಕಾರ್ಯಕ್ರಮಕ್ಕೆ ಸಮಿತಿ ವತಿಯಿಂದ ಈಗಾಗಲೇ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದೆ. ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಕಚೇರಿಯ ನಿರ್ವಹಣೆಗಾಗಿ ಎರಡು ಲಕ್ಷಕ್ಕೂ ಅಧಿಕ ಪೀಟೋಪಕರಣಗಳ ಅವಶ್ಯಕತೆಯಿದ್ದು ಇದನ್ನು ಸಾರ್ವಜನಿಕರಾದ ನಾವು ನೀಡಬೇಕಾಗಿದೆ. ಈಗಾಗಲೇ ವಿವಿಧ ಪಂಚಾಯ್ತಿ ಹಾಗೂ ಸಹಕಾರ ಸಂಘಗಳು, ಕೆಲವು ದಾನಿಗಳು ಸಹಾಯ ನೀಡಿದ್ದಾರೆ. ಮುಂದೆ ನಾಗರಿಕರು ತಾವೆ ಆಸಕ್ತಿ ವಹಿಸಿ ತಮ್ಮ ಸಹಕಾರವನ್ನು ಸಮಿತಿಗೆ ನೀಡಬೇಕೆಂದು ಮನವಿ ಮಾಡಿದರು.
ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ ತಾಲೂಕು ರಚನೆಗೆ ಪಕ್ಷ ಬೇಧ ಮರೆತು ಶ್ರಮಿಸಿದ್ದಾರೆ. ಸಮಿತಿಯನ್ನು ಮುಂದುವರೆಸಿಕೊಂಡು ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸೋಣ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡೋಣ ಎಂದರು. ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಸಿ.ಕೆ.ಸೋಮಯ್ಯ ಸಮಿತಿಯು ಸಾರ್ವಜನಿಕವಾಗಿ ಸಂಗ್ರಹಿಸಿದ ಹಣದ ವಿವರವನ್ನು ಸಭೆಯ ಮುಂದಿಟ್ಟರು. ಸಭೆಯು ಒಮ್ಮತದಿಂದ ಈ ಲೆಕ್ಕ ಪತ್ರವನ್ನು ಅಂಗೀಕರಿಸಿತು.ಸಭೆಯಲ್ಲಿ ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ,ಹುದಿಕೇರಿಯ ಹಿರಿಯ ನಾಗರಿಕರ ಚೆಕ್ಕೆರ ವಾಸು ಕುಟ್ಟಪ್ಪ,ಸಮಿತಿಯ ನಿರ್ದೇಶಕರಾದ ಎರ್ಮು ಹಾಜಿ, ಸೇರಿದಂತೆ ಅನೇಕ ಹಿರಿಯರು ತಮ್ಮ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ ತಾಲೂಕು ಪಂಚಾಯ್ತಿ ಸದಸ್ಯರಾದ ಆಶಾ ಜೇಮ್ಸ್, ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೂಕಳೇರ ಸುಮಿತ್ರ, ಸದಸ್ಯರಾದ ಕಾವ್ಯ ಮಧು, ರೇಖಾ ಶ್ರೀಧರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಬಿ.ಪೂಣಚ್ಚ ಸ್ವಾಗತಿಸಿ, ವಂದಿಸಿದರು.