ಮಡಿಕೇರಿ, ಮಾ. 15: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದಿಂದ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗಲಿರುವ ಹೆದ್ದಾರಿಗಳು ಸೇರಿದಂತೆ; ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸರ್ವಋತು ರಸ್ತೆ ಅಭಿವೃದ್ಧಿಯೊಂದಿಗೆ ವಿದ್ಯುತ್, ಸಾರಿಗೆ, ಕುಡಿಯುವ ನೀರಿನಂತಹ ಸಂಪೂರ್ಣ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಭೂ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ಕೆ.ಜಿ. ಬೋಪಯ್ಯ ಭರವಸೆ ನೀಡಿದ್ದಾರೆ.
ಬೆಟ್ಟಗೇರಿ ಹಾಗೂ ಮದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಂಡಿರುವ ರೂ. 11 ಕೋಟಿ ವೆಚ್ಚದ ನಮ್ಮ ಗ್ರಾಮ-ನಮ್ಮ ರಸ್ತೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರಕಾರ ಪ್ರಸ್ತುತ ಮುಂಗಡ ಪತ್ರದಲ್ಲಿ 2024ಕ್ಕೆ ಸಮಗ್ರ ಭಾರತದ ಅಭ್ಯುದಯಕ್ಕೆ ಯೋಜನೆ ರೂಪಿಸಿದೆ ಎಂದು ನೆನಪಿಸಿದ ಅವರು; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಮುಂದಿನ ಮೂರು ವರ್ಷ ಸುಭದ್ರವಿದ್ದು, ಕೊಡಗಿನ ರಸ್ತೆ, ಸೇತುವೆ, ಮೋರಿಗಳ ಸಹಿತ ಎಲ್ಲರೀತಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಿದೆ ಎಂದು ಘೋಷಿಸಿದರು.
ಪರಿಹಾರ ಭರವಸೆ: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಒಳಗಾಗಿರುವ
(ಮೊದಲ ಪುಟದಿಂದ) ಗ್ರಾಮೀಣ ರೈತರಿಗೆ ಅಗತ್ಯ ಪರಿಹಾರ ಹಾಗೂ ಸಹಕಾರ ಕ್ಷೇತ್ರದಲ್ಲಿ ರೂ. 1 ಲಕ್ಷ ಸಾಲ ಮನ್ನಾಕ್ಕೆ ಕ್ರಮಕೈಗೊಂಡಿದ್ದು, ಸರಕಾರದ ಯೋಜನೆಗಳು ದುರುಪಯೋಗ ಆಗದಂತೆ ಆಯ ಭಾಗದ ಜನತೆ ನಿಗಾವಹಿಸುವಂತೆಯೂ ಶಾಸಕರು ತಿಳಿ ಹೇಳಿದರು.
ರೂ. 18 ಕೋಟಿ ನೀರಿಗೆ: ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರಕಾರದಿಂದ ರೂ. 18 ಕೋಟಿ ಅನುದಾನ ಬಿಡಿಗಡೆಯಾಗಿದ್ದು, ಗ್ರಾಮೀಣ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯಕ್ಕಾಗಿ ಶಾಸಕರು, ಸಂಸದರ ಪ್ರಯತ್ನದಿಂದ ಹೆಚ್ಚಿನ ಅನುದಾನ ಲಭಿಸುತ್ತಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ಶ್ಲಾಘನೆಯ ನುಡಿಯಾಡಿದರು.
ಹೆದ್ದಾರಿ ಬೋಪಯ್ಯ: ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲೆಡೆ ನೀರಿನ ಸೌಲಭ್ಯ ಕೊಡಿಸಿ ಸಚಿವ ನಜೀರ್ ಸಾಬ್ ‘ನೀರ್ ಸಾಹೇಬ್’ ಆಗಿದ್ದರೆ; ಕೊಡಗಿನ ಶಾಸಕರು ಎಲ್ಲೆಡೆ ರಸ್ತೆಯೊಂದಿಗೆ; ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಜನಮನ್ನಣೆಯಿಂದ ‘ಹೆದ್ದಾರಿ ಬೋಪಯ್ಯ’ ಎಂದು ಹೆಸರಾಗಿದ್ದಾರೆ ಎಂದು ತಾ.ಪಂ. ಸದಸ್ಯ ಕೊಡಪಾಲ್ ಗಣಪತಿ ಕೊಂಡಾಡಿದರು.
ಬೆಟ್ಟಗೇರಿ ಉದಯ ಪ್ರೌಢಶಾಲೆ ಹಾಗೂ ವಿಎಸ್‍ಎಸ್‍ಎನ್ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಬಿ.ಎ. ಹರೀಶ್ ಅವರು ಶ್ಲಾಘನೆಯ ನುಡಿಯಾಡಿದರು.
ಹೆದ್ದಾರಿ ಬೋಪಯ್ಯ: ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲೆಡೆ ನೀರಿನ ಸೌಲಭ್ಯ ಕೊಡಿಸಿ ಸಚಿವ ನಜೀರ್ ಸಾಬ್ ‘ನೀರ್ ಸಾಹೇಬ್’ ಆಗಿದ್ದರೆ; ಕೊಡಗಿನ ಶಾಸಕರು ಎಲ್ಲೆಡೆ ರಸ್ತೆಯೊಂದಿಗೆ; ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಜನಮನ್ನಣೆಯಿಂದ ‘ಹೆದ್ದಾರಿ ಬೋಪಯ್ಯ’ ಎಂದು ಹೆಸರಾಗಿದ್ದಾರೆ ಎಂದು ತಾ.ಪಂ. ಸದಸ್ಯ ಕೊಡಪಾಲ್ ಗಣಪತಿ ಕೊಂಡಾಡಿದರು.
ಬೆಟ್ಟಗೇರಿ ಉದಯ ಪ್ರೌಢಶಾಲೆ ಹಾಗೂ ವಿಎಸ್‍ಎಸ್‍ಎನ್ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಸ್ಮರಿಸಿದರು. ತಾ.ಪಂ. ಇನ್ನೋರ್ವ ಸದಸ್ಯೆ ಕುಮುದ ರಶ್ಮಿ, ಶಾಂತಿ ಸೋಮಣ್ಣ, ಬೆಟ್ಟಗೇರಿ ಹಾಗೂ ಮದೆ ಗ್ರಾ.ಪಂ. ಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಸ್ತೆ ಗುತ್ತಿಗೆದಾರ ಗೋಪಾಲಕೃಷ್ಣ, ಸಹಾಯಕ ಇಂಜಿನಿಯರ್ ಪ್ರಭು ಸೇರಿದಂತೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭ ಹೆರವನಾಡು ದವಸ ಭಂಡಾರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರವಿಚಂದ್ರ ನಿರೂಪಿಸಿ, ಬೆಪ್ಪುರನ ಮೇದಪ್ಪ ವಂದಿಸಿದರು.