ಶನಿವಾರಸಂತೆ, ಮಾ. 13: ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಮಾಸಿಕ ಸಭೆಯು ಕಚೇರಿಯ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್. ನಿರಂಜನ್ ಮಾತನಾಡಿ, ಹೊಸದಾಗಿ ಸದಸ್ಯರುಗಳನ್ನು ಸೇರಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಕ್ಲಬ್‍ನ ಲೆಕ್ಕ ಪತ್ರಗಳನ್ನು ಸಭೆಗೆ ಮಂಡಿಸಿ ಇತ್ತೀಚೆಗೆ ನಡೆದ ರಕ್ತ ಸಂಗ್ರಹಣ ಕಾರ್ಯಕ್ರಮದ ಖರ್ಚಿನ ವಿವರಗಳನ್ನು ನೀಡಿದರು. ತಾ. 29 ರಂದು ಮೈಸೂರಿನಲ್ಲಿ ನಡೆಯಲಿರುವ ವಲಯ ಮಟ್ಟದ ಸಮ್ಮೇಳನದಲ್ಲಿ ಕ್ಲಬ್‍ನ ಎಲ್ಲಾ ಸದಸ್ಯರುಗಳು ಭಾಗವಹಿಸುವಂತೆ ಕೋರಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಸಿ.ಪಿ. ಹರೀಶ್. ಎನ್.ಕೆ. ಮೂರ್ತಿ, ಎಸ್.ಎಸ್. ಚಂದ್ರಶೇಖರ್, ಎಸ್.ಜಿ. ನರೇಶಚಂದ್ರ, ಕೇಶವಮೂರ್ತಿ, ಎನ್.ಕೆ. ಕುಶಾಲಪ್ಪ, ಎಂ.ಆರ್. ಮಲ್ಲೇಶ್, ಪರಮೇಶ್ ಇತರರು ಉಪಸ್ಥಿತರಿದ್ದರು. ಚಂದ್ರಶೇಖರ್ ಧ್ವಜವಂದನೆ ಮಾಡಿದರು. ಎಂ.ಆರ್. ನಿರಂಜನ್ ಸ್ವಾಗತಿಸಿ, ವಂದಿಸಿದರು.