ನಾಪೆÇೀಕ್ಲು, ಮಾ. 13: ಸಮೀಪದ ಬಲಮುರಿ ಅಗಸ್ತ್ಯೇಶ್ವರ ದೇವಳದ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯಿತು.

ತಾ. 4 ರಿಂದ ಆರಂಭಗೊಂಡ ಉತ್ಸವವು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಎತ್ತೇರಾಟ, ತೆಂಗಿನಕಾಯಿಗೆ ಗುಂಡು ಹಾರಿಸುವ ಸಾಂಪ್ರದಾಯಿಕ ಆಚರಣೆ, ದೇವರ ಅವಭೃತ ಸ್ನಾನ, ನೃತ್ಯ ಬಲಿ, ಬುಧವಾರ ಅಜ್ಜಪ್ಪ ಕೋಲ ಹಾಗೂ ಚಾಮುಂಡಿ ಕೋಲಗಳು, ದೇವಳದಲ್ಲಿ ನಡೆದ ಶುದ್ಧ ಕಲಶದೊಂದಿಗೆ ಉತ್ಸವ ಸಂಪನ್ನಗೊಂಡಿತು. ಅರ್ಚಕ ಚಂದ್ರಶೇಖರ ಐತಾಳ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.