ಸುಂಟಿಕೊಪ್ಪ, ಮಾ.13: ಸುಂಟಿಕೊಪ್ಪ ಗ್ರಾಮ ದೇವರ ಪ್ರಥಮ ವರ್ಷದ ವಾರ್ಷಿಕೋತ್ಸವವು ತಾ.17 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಸ್ಥಳಶುದ್ಧಿ, 8 ಗಂಟೆಗೆ ಮಹಾಮಂಗಳಾರತಿ, 9 ಗಂಟೆಗೆ ದೇವಿಗೆ ಹರಕೆ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

* ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಚಾಮುಂಡೇಶ್ವರಿ ಹಾಗೂ ಪರಿವಾರ ದೇವರ ವಾರ್ಷಿಕೋತ್ಸವ ತಾ. 27 ರಂದು ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ದೇವಪ್ಪ ತಿಳಿಸಿದ್ದಾರೆ.