ನಾಪೆÇೀಕ್ಲು, ಮಾ. 13: ಮಹಿಳೆ ತಾನು ನಿರ್ವಹಿಸುವ ಕೆಲಸದಲ್ಲಿ ಬದ್ಧತೆ ಹೊಂದಿದ್ದರೆ ಯಶಸ್ಸು ಸಾಧ್ಯ. ಯೋಗ ಮತ್ತು ಯೋಗ್ಯತೆ ಜೊತೆಯಲ್ಲೇ ಬಂದಾಗ ವ್ಯಕ್ತಿತ್ವ ಉನ್ನತ ಸ್ಥಾನಕ್ಕೇರುತ್ತದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಅಡ್ಡಂಡ ಅನಿತಾಕಾರ್ಯಪ್ಪ ಅಭಿಪ್ರಾಯಪಟ್ಟರು.
ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಗ್ರಾಮ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಂದು ಸಮಾಜದಲ್ಲಿ ಸ್ತ್ರೀಯರು ಪುರುಷರಿ ಗಿಂತ ಯಾವದೇ ವಿಚಾರದಲ್ಲಿ ಕಡಿಮೆಯಿಲ್ಲ ಎನ್ನುವದನ್ನು ಸಾಬೀತುಪಡಿಸಿಕೊಂಡು ಬರುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಹಿಳೆಯರು ದಿಟ್ಟ ಹೆಜ್ಜೆಯನ್ನು ಇಡಬೇಕು ಎಂದರು.
ವಿದ್ಯಾರ್ಥಿನಿಯರು ಶಾಲಾ ಹಂತದಲ್ಲಿಯೇ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮಾರ್ಗದರ್ಶನ ನೀಡುವ ಶಿಕ್ಷಕರನ್ನು ಗೌರವದಿಂದ ಕಾಣಬೇಕು. ವಿಶಾಲ ಮನೋಭಾವನೆ ಯನ್ನು ರೂಢಿಸಿಕೊಂಡು ಜೀವನ ಮುನ್ನಡೆಸಬೇಕು. ಮಹಿಳೆ ತಾನು ತೊಡಗಿಸಿಕೊಳ್ಳುವ ಯಾವದೇ ಕ್ಷೇತ್ರದಲ್ಲಿ ಬದ್ಧತೆ ತೋರಿದರೆ ಅದು ಧೈರ್ಯವನ್ನು ತರುತ್ತದೆ, ಭಯವನ್ನು ಹೋಗಲಾಡಿಸುತ್ತದೆ. ಆರಿಸಿಕೊಳ್ಳುವ ಕ್ಷೇತ್ರ ಯಾವದೇ ಇರಲಿ. ಅದರಲ್ಲಿ ಸಾಧನೆ ಮಾಡುವಂತಹ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು.
ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಮಾತನಾಡಿ, ಜೀವನದಲ್ಲಿ ಕುಗ್ಗದೆ, ಧೃತಿಗೆಡದೆ ಮುನ್ನುಗ್ಗುವ ಛಲ ಮಹಿಳೆಯರಲ್ಲಿರಬೇಕು ಎಂದರು.
ಸುಂಟಿಕೊಪ್ಪ ಸ್ವಸ್ಥ ಶಾಲೆಯ ಶಿಕ್ಷಕಿ ಆಶಾ ಮಾತನಾಡಿ, ಶಾಲೆಯಲ್ಲಿ ವಿಶೇಷಚೇತನ ಮಕ್ಕಳಿಗೆ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡಲಾಗುತ್ತಿದೆ ಎಂದರು.
ನೆಲಜಿ ಮಹಿಳಾ ಸಮಾಜದ ಅಧ್ಯಕ್ಷೆ ಮಣವಟ್ಟಿರ ಕಮಲ ಬೆಳ್ಯಪ್ಪ, ಬಲ್ಲಮಾವಟಿ ಮಹಿಳಾ ಸಮಾಜದ ಅಧ್ಯಕ್ಷೆ ಮೂವೆರ ರೇಖಾ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬದ್ದಂಜೆಟ್ಟಿರ ದೇವಿ ದೇವಯ್ಯ, ಬೈರುಡ ಮುತ್ತಪ್ಪ, ಚಂಗೇಟಿರ ಕುಮಾರ್ ಸೋಮಣ್ಣ, ನೇತಾಜಿ ಪ್ರೌಢಶಾಲಾ ಶಿಕ್ಷಕರಾದ ಸುರೇಶ್, ಕಾವೇರಿಯಮ್ಮ, ಪಾಲ್ಗೊಂಡಿದ್ದರು. ಪಿಡಿಒ ಶ್ರೀಧರ್ ಸ್ವಾಗತಿಸಿ, ವಂದಿಸಿದರು.