ಕಾಫಿಯ ಲೆಕ್ಕಚಾರದ ಬಗ್ಗೆ ಬೆಳೆಗಾರರಿಗೆ ಚೆನ್ನಾಗಿ ತಿಳಿದಿರಬಹು ದಾದರೂ ಶ್ರೀ ಸಾಮಾನ್ಯರಿಗೆ ಹೆಚ್ಚಿನ ಅರಿವು ಇರಲಿಕ್ಕಿಲ್ಲ. ಚೇರಂಬಾಣೆಯ ಕೃಷಿಕ ಕಾಫಿ ಬೆಳೆಗಾರ ಬೈಮನ ರಘು ಅವರು ರೋಬಸ್ಟಾ ಕಾಫಿಯ ಪ್ರಮಾಣದ ಕುರಿತು ಒಂದು ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಿದ್ದು ಈ ರೀತಿ ಇದೆ.
ಒಂದು ಚೀಲ ಕಾಫಿಗೆ 125 ಕೆ.ಜಿ. ಹಸಿ ಕಾಫಿ ಬೀಜಗಳು ಬೇಕು. ಅದು ಒಣಗಿದಾಗ 50 ಕೆ.ಜಿ. ಯಾಗುತ್ತದೆ. ಒಂದು ಕೆ.ಜಿ. ಹಸಿ ಕಾಫಿ ಒಣಗಿದಾಗ 400 ಗ್ರಾಂಗಳಾಗುತ್ತದೆ. ಒಂದು ಕೆ.ಜಿ.ಗೆ 600 ಕಾಳುಗಳು ಬೇಕಾಗುತ್ತದೆ. ಈ ಲೆಕ್ಕಚಾರದಂತೆ 1 ಚೀಲ ಕಾಫಿಗೆ 30 ಸಾವಿರ ಕಾಫಿ ಬೀಜಗಳು ಬೇಕಾಗುತ್ತದೆ.
ಕಾಫಿಯ ಗಿಡ ನೆಟ್ಟು 3 ವರ್ಷವಾದಾಗ ಮೊದಲ ಫಸಲನ್ನು ಕಾಣಬಹುದಾಗಿದ್ದು, 10 ವರ್ಷಗಳ ಬಳಿಕ ಹೆಚ್ಚಿನ ಫಸಲನ್ನು ನಿರೀಕ್ಷಿಸಬಹುದಾಗಿದೆ. ಒಂದು ಕಾಫಿ ಗಿಡ ಹೆಚ್ಚೆಂದರೆ 100 ವರ್ಷಗಳವರೆಗೆ ಜೀವಂತವಾಗಿರುತ್ತದೆ. 1 ಗಿಡದಲ್ಲಿ ಗರಿಷ್ಠ 80 ಕೆ.ಜಿ.ಯಷ್ಟು ಫಸಲು ಸಿಗುತ್ತದೆ.
? ರಘು, 9448700970