ಸುಂಟಿಕೊಪ್ಪ, ಮಾ. 13: ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಗದ್ದೆಹಳ್ಳದಲ್ಲಿರುವ ವಿಕಾಸ ಜನಸೇವಾ ಟ್ರಸ್ಟ್‍ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸೇವಾ ಮನೋಭಾವದ ಬಗ್ಗೆ ಅರಿವು ಮೂಡಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಆಶ್ರಮದಲ್ಲಿ ಆಶ್ರಯ ಪಡೆದಿರುವ ವೃದ್ಧರ ಜೊತೆಯಲ್ಲಿ ಸಮಾಲೋಚನೆ ನಡೆಸಿದರು.
ಆಶ್ರಮ ಅಧ್ಯಕ್ಷ ರಮೇಶ್, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ, ಎನ್.ಎಸ್.ಎಸ್. ಅಧಿಕಾರಿ ಸಿ.ಟಿ. ಸೋಮಶೇಖರ್, ಮಹಿಳಾ ಅಧಿಕಾರಿ ಶಾಂತ ಹೆಗಡೆ, ಶಿಕ್ಷಕರಾದ ಚಿತ್ರಾ, ಪುಷ್ಪಾ, ಮಂಜುಳ, ವಿದ್ಯಾರ್ಥಿ ನಾಯಕರುಗಳಾದ ಅನಿಲ್, ಹರೀಶ್, ಮೇಘ, ಅನ್ನಪೂರ್ಣ ಹಾಗೂ ಎನ್.ಎಸ್.ಎಸ್.ನ ಎಲ್ಲ ಸ್ವಯಂಸೇವಕರು ಇದ್ದರು.