ಮಡಿಕೇರಿ, ಮಾ. 12: ಮಂಗಳೂರು ಕಾರ್ ಸ್ಟ್ರೀಟ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಶೇಷಪ್ಪ ಅಮೀನ್ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದೆ. ಎ ಸ್ಟಡಿ ಆಫ್ ದಿ ಇಂಪ್ಯಾಕ್ಟ್ ಆಫ್ ಶ್ರೀ ನಾರಾಯಣಗುರು ಮೂವ್ ಮೆಂಟ್ ಆನ್ ಬಿಲ್ಲವ ಕಮ್ಯುನಿಟಿ ಇನ್ ಕೋಸ್ಟಲ್ ಕರ್ನಾಟಕ ಎಂಬ ಮಹಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಮೂಲತಃ ಕೊಡಗಿನ 2ನೇ ಮೊಣ್ಣಂಗೇರಿ ನಿವಾಸಿ ಆಗಿರುವ ಶೇಷಪ್ಪ ಅವರು ಬಿಲ್ಲವ ಎಂಪ್ಲಾಯಿಸ್ ವೆಲ್ ಫೇರ್ ಸೊಸೈಟಿಯ ಸಕ್ರಿಯ ಸದಸ್ಯರಾಗಿದ್ದಾರೆ.