ನಾಪೆÇೀಕ್ಲು ಮಾ. 12: ಕಳೆದ ಎರಡು ದಿಗಳಿಂದ ಈ ವಿಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತು ಇತರ ಸೈಬರ್ ಕೇಂದ್ರಗಳಲ್ಲಿ ಗಣಕಯಂತ್ರದ ಸರ್ವರ್ ಸಮಸ್ಯೆ ಕಾಣಿಸಿಕೊಂಡು ಜನರು ಬೆರಳಚ್ಚು ನೀಡಲು ಮತ್ತು ಆರ್.ಟಿ.ಸಿ ತೆಗೆಯಲು ಪರದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರವು ತಾ. 10 ರ ತನಕ ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ ಬೆರಳಚ್ಚು ನೀಡಬೇಕೆಂದು ಆದೇಶವನ್ನು ಹೊರಡಿಸಿದೆ. ಆದರೆ ಸರ್ವರ್ ಸಮಸ್ಯೆಯಿಂದ ಇನ್ನು ಕೆಲವು ಪಡಿತರದಾರರು ಬೆರಳಚ್ಚು ನೀಡಲು ಬಾಕಿ ಇದ್ದು ಸರಕಾರ ಈ ಅವಧಿಯನ್ನು ವಿಸ್ತರಿಸುವಂತೆ ನಾಪೆÇೀಕ್ಲು ಪಡಿತರ ಚೀಟಿದಾರರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.