ಮಡಿಕೇರಿ, ಮಾ. 12 : ಕರ್ನಾಟಕ ರಾಜ್ಯದಲ್ಲಿ ಕೊಡಗು ಸೇರಿದಂತೆ ಗ್ರಾಮೀಣ ಭಾಗದ ರೈತರು ಸರಕಾರಿ ಜಮೀನನ್ನು ಸಣ್ಣ ಪುಟ್ಟ ಪ್ರಮಾಣದಲ್ಲಿ ಅತಿಕ್ರಮಣ ಮಾಡಿಕೊಂಡಿದ್ದರೆ, ಅಂತಹ ಜಾಗವನ್ನು ತೆರವುಗೊಳಿಸದಂತೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಿರ್ಣಯ ಕೈಗೊಂಡಿದೆ.ವಿಧಾನ ಸಭೆಯ ಮಾಜೀ ಅಧ್ಯಕ್ಷರೂ ಆಗಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ಪ್ರಸ್ತುತ ಸರಕಾರಿ ಜಾಗ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದು, ಸಭೆಯಲ್ಲಿ ವಿಷಯ ಪ್ರಸ್ತಾಪಿಸುವದರೊಂದಿಗೆ, ಗ್ರಾಮೀಣ ಭಾಗದಲ್ಲಿ ಒಂದೆರಡು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸಣ್ಣ ಪ್ರಮಾಣದ ಕೃಷಿಕರಿಗೆ ಕಂದಾಯ ಮತ್ತು ಅರಣ್ಯ ಇಲಾಖೆ ಕಿರುಕುಳ ಮಡಿಕೇರಿ, ಮಾ. 12 : ಕರ್ನಾಟಕ ರಾಜ್ಯದಲ್ಲಿ ಕೊಡಗು ಸೇರಿದಂತೆ ಗ್ರಾಮೀಣ ಭಾಗದ ರೈತರು ಸರಕಾರಿ ಜಮೀನನ್ನು ಸಣ್ಣ ಪುಟ್ಟ ಪ್ರಮಾಣದಲ್ಲಿ ಅತಿಕ್ರಮಣ ಮಾಡಿಕೊಂಡಿದ್ದರೆ, ಅಂತಹ ಜಾಗವನ್ನು ತೆರವುಗೊಳಿಸದಂತೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಿರ್ಣಯ ಕೈಗೊಂಡಿದೆ.

ವಿಧಾನ ಸಭೆಯ ಮಾಜೀ ಅಧ್ಯಕ್ಷರೂ ಆಗಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ಪ್ರಸ್ತುತ ಸರಕಾರಿ ಜಾಗ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದು, ಸಭೆಯಲ್ಲಿ ವಿಷಯ ಪ್ರಸ್ತಾಪಿಸುವದರೊಂದಿಗೆ, ಗ್ರಾಮೀಣ ಭಾಗದಲ್ಲಿ ಒಂದೆರಡು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸಣ್ಣ ಪ್ರಮಾಣದ ಕೃಷಿಕರಿಗೆ ಕಂದಾಯ ಮತ್ತು ಅರಣ್ಯ ಇಲಾಖೆ ಕಿರುಕುಳ (ಮೊದಲ ಪುಟದಿಂದ) 2007 ರಲ್ಲಿಯೇ ಅಂದಿನ ಸರಕಾರ ಈ ನಿರ್ಧಾರ ಕೈಗೊಂಡಿದ್ದರೂ ಕೆಲವು ಅಧಿಕಾರಿಗಳು ಗ್ರಾಮೀಣ ಜನತೆಗೆ ತೊಂದರೆ ಪಡಿಸಿ, ಮೊಕದ್ದಮೆಗಳನ್ನು ದಾಖಲಿಸಿರುವ ಕುರಿತು ಪರಿಶೀಲನೆಯೊಂದಿಗೆ, ಅವುಗಳನ್ನು ಸರಕಾರ ಹಿಂಪಡೆಯುವ ನಿರ್ಣಯ ಕೈಗೊಳ್ಳಲಾಗಿದೆ.

ಅಂದು ಸಭೆ : ತಾ. 13 ರಂದು (ಇಂದು) ಕರ್ನಾಟಕರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಸಭೆಯು ಸಂಬಂಧಿಸಿದ ಸಮಿತಿಯ ಅಧ್ಯಕ್ಷರಾಗಿರುವ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವದರೊಂದಿಗೆ, ಸರಕಾರಿ ಜಾಗ ಅತಿಕ್ರಮಣ ಸಂಬಂಧ ಗಂಭೀರ ಸಮಾಲೋಚನೆ ನಡೆಯಲಿದೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಾಜ್ಯದ ಕಂದಾಯ, ಅರಣ್ಯ,ಕೃಷಿ, ಗ್ರಾಮೀಣ ಸಚಿವಾಲಯಗಳ ಮಂತ್ರಿಗಳು, ಅಧಿಕಾರಿಗಳು ಸೇರಿದಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೂಡ ಪಾಲ್ಗೊಂಡಿದ್ದರೆಂದು ಮಾಹಿತಿ ಲಭಿಸಿದೆ.