ಕೂಡಿಗೆ, ಮಾ. 12: ಜಿಲ್ಲಾ ಯವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಅನೇಕ ಯುವ ಕ್ರೀಡಾ ಪಟುಗಳಿಗೆ ಅನುಕೂಲವಾಗುವಂತೆ ಅವರವರ ಅರ್ಹತೆಗೆ ತಕ್ಕಂತೆ ಆಯಾ ಪಂದ್ಯಾಟದ ತರಬೇತಿಯನ್ನು ಕ್ರೀಡಾ ಇಲಾಖೆಯ ವತಿಯಿಂದ ನೀಡಬೇಕೆಂದು ಕುಶಾಲನಗರದ ಹೋಬಳಿ ವ್ಯಾಪ್ತಿಯ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.

ಕೂಡಿಗೆಯಲ್ಲಿ ಕ್ರೀಡಾ ಇಲಾಖೆಯ ಅತ್ಯುತ್ತಮವಾದ ಆಟದ ಮೈದಾನದ ವ್ಯವಸ್ಥೆ ಇದೆ ಇದರ ಜೊತೆಗೆ ಹಾಕಿ ಕ್ರೀಡಾಪಟುಗಳಿಗೆ ನೂತನ ಹಾಕಿ ಟರ್ಫ್ ಮೈದಾನ ಸೇರಿದಂತೆ ಒಳಾಂಗಣಕ್ರೀಡಾಂಗಣ ಮತ್ತು ಇತರೆ ಆಟೋಟಗಳಿಗೆ ಈ ಕೇಂದ್ರ ಅನುಕೂಲ ಇರುವುದರಿಂದ ಉಚಿತವಾಗಿ ಕ್ರೀಡಾ ತರಬೇತಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ.