ಮಡಿಕೇರಿ, ಮಾ. 12: ಕೊಡಗಿನಲ್ಲಿ ಜಲಪ್ರಳಯದಿಂದ ಸಂತ್ರಸ್ತರಾದ ಕುಟುಂಬಗಳಿಗಾಗಿ 741 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 115 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. 124 ಮನೆಗಳು ಛಾವಣಿ ಹಂತದಲ್ಲಿದ್ದು, ಉಳಿದ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆಗೆ ವಸತಿ ಸಚಿವ ಸೋಮಣ್ಣ ಮಾಹಿತಿ ನೀಡಿದರು.
ಸೋಮವಾರಪೇಟೆ, ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕು ಮಾರ್ಗವಾಗಿ ಜಿಲ್ಲೆಯ ಕೇಂದ್ರಸ್ಥಾನವನ್ನು ಹೊಂದಿಕೊಂಡಂತೆ ಮೂರು ತಾಲೂಕುಗಳ ಮೇಲೆ ಹಾದುಹೋಗಲು ಚನ್ನರಾಯಪಟ್ಟಣ- ಹೊಳೆನರಸೀಪುರ- ಕೊಡ್ಲಿಪೇಟೆ - ಸೋಮವಾರಪೇಟೆ- ಮಡಿಕೇರಿ- ವೀರಾಜಪೇಟೆ ಮಾರ್ಗವಾಗಿ ದ್ವಿಪಥ ರಸ್ತೆ (ಹೈವೆ) ಮಾರ್ಗವನ್ನು ಮಂಜೂರು ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂಬ ರಂಜನ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಚನ್ನರಾಯಪಟ್ಟಣ - ಹೊಳೆನರಸೀಪುರ- ಅರಕಲಗೋಡುವರೆಗಿನ ರಸ್ತೆ ಭಾಗವನ್ನು ಕೆ.ಆರ್.ಡಿ.ಸಿ.ಎಲ್.ನಿಂದ ದ್ವಿಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಆ ರಸ್ತೆಯ ಮುಂದುವರೆದ ಭಾಗವಾದ ಕೊಡಗು ಜಿಲ್ಲಾ ವ್ಯಾಪ್ತಿಯ ಸೋಮವಾರಪೇಟೆ- ಮಡಿಕೇರಿ - ವೀರಾಜಪೇಟೆವರೆಗಿನ 71 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ಕೆಶಿಪ್-2ರ ಅಡಿಯಲ್ಲಿ ಡಿ.ಪಿ.ಆರ್. ಸಿದ್ಧಪಡಿಸಲಾಗಿತ್ತು. ಆದರೆ, ಬಾಹ್ಯ ನೆರವು ದೊರೆಯದ ಕಾರಣ ಸದರಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವುದು ಸಾಧ್ಯವಾಗಿರುವುದಿಲ್ಲ.
ಎಡಿಬಿ ನೆರವಿನ ಕೆಶಿಪ್-3 ಯೋಜನೆಯಡಿ ದೋಣಿಗಲ್‍ನಿಂದ ಪ್ರಾರಂಭವಾಗಿ ಕೊಡ್ಲಿಪೇಟೆ- ಸೋಮವಾರಪೇಟೆ- ಮಡಿಕೇರಿ - ವೀರಾಜಪೇಟೆ ಮೂಲಕ ಕೇರಳ ಗಡಿವರೆಗಿನ 150 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಚಿಸಿ, ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿತ್ತು. ಆದರೆ, ಕೆಶಿಪ್ ಪ್ರಸ್ತಾವನೆಯಂತೆ ಅಗತ್ಯ ಆರ್ಥಿಕ ನೆರವು