ಮಡಿಕೇರಿ, ಮಾ. 12 : ದುಬೈನಲ್ಲಿ ನೆಲೆಸಿದ್ದ ಕೊಡಗು ಮೂಲದ ವ್ಯಕ್ತಿಯೊಬ್ಬ ಇಂದು ಬೆಳಗ್ಗಿನ ಜಾವ ಕುಶಾಲನಗರಕ್ಕೆ ತಲಪಿದ್ದು, ಬಳಿಕ ಸೋಮವಾರಪೇಟೆಗೆ ಪಯಣಿಸುವುದರೊಂದಿಗೆ ಗಂಟಲು ಉರಿ ಇತ್ಯಾದಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಸಂಶಯಗೊಂಡ ಅಲ್ಲಿನ ವೈದ್ಯರು ಜಿಲ್ಲಾ ಆರೋಗ್ಯ ಇಲಾಖೆಗೆ ಸಂದೇಶ ರವಾನಿಸಿದರೆನ್ನಲಾಗಿದೆ.

ಅಲ್ಲದೆ ಕೊರೊನಾ ಸೋಂಕಿನ ಶಂಕೆಯಿಂದ ನೇರ ಆಸ್ಪತ್ರೆಗೆ ತೆರಳಿದ್ದಾಗಿಯೂ ತಾನು ಇನ್ನೂ ಕೂಡ ಮನೆಗೂ ಹೋಗಿಲ್ಲವೆಂದು ಈ ವ್ಯಕ್ತಿಯೇ ಹೇಳಿಕೊಂಡಿರುವ ಮೇರೆಗೆ ಸೂಕ್ತ ಮುಂಜಾಗ್ರತಾ ವ್ಯವಸ್ಥೆಯೊಂದಿಗೆ ಇಲ್ಲಿನ ವೈದ್ಯಕೀಯ ವಿಜ್ಞಾನ ಕಾಲೇಜಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಅಲ್ಲಿ ಕೊರೊನಾ ಸೋಂಕು ಪತ್ತೆ ಸಂಬಂಧ ತಪಾಸಣೆಗಾಗಿ ಕಾಯ್ದಿರಿಸಿರುವ ಪ್ರತ್ಯೇಕ ವಾರ್ಡ್‍ನಲ್ಲಿ ಈ ವ್ಯಕ್ತಿಯನ್ನು ತಪಾಸಣೆಗಾಗಿ ದಾಖಲಿಸಲಾಗಿದೆ.‘ಶಕ್ತಿ’ಗೆ ವಿಶ್ವಾಸನೀಯ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ; ದುಬೈನಿಂದ ನಿನ್ನೆ ಭಾರತದತ್ತ ವಿಮಾನ ಏರುವ ಮುನ್ನ ಸಂಬಂಧಿಸಿದ ಈ ವ್ಯಕ್ತಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಸಂದರ್ಭ ಕೊರೊನದಂತಹ ಯಾವುದೇ ಸೋಂಕು ಇರಲಿಲ್ಲವೆಂದೂ; ಭಾರತಕ್ಕೆ ಪ್ರಯಾಣಿಸಲು ಅಡ್ಡಿಯಿಲ್ಲವೆಂದು ಖಾತರಿಯೊಂದಿಗೆ ಬಂದಿರುವುದಾಗಿ ಹೇಳಲಾಗುತ್ತಿದೆ.ಬಳಿಕ ಇಂದು ಬೆಳಗ್ಗಿನ ಜಾವ 4.30ರ ವೇಳೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿಯೂ ಕೂಡ ವೈದ್ಯಕೀಯ ಪರೀಕ್ಷೆ ನಡೆಸಲಾಗಿ; ಕೊಡಗು ಮೂಲದ ಈತ ಆರೋಗ್ಯವಾಗಿ ಇದ್ದುದಾಗಿ ಮಾಹಿತಿ ಲಭಿಸಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸಿರುವ ಇವರು, ಕುಶಾಲನಗರಕ್ಕೆ ಬಂದಿಳಿದಿದ್ದು, ಮರಳಿ ಸೋಮವಾರಪೇಟೆಗೆ ತೆರಳಿದ್ದಾಗಿ ಕೊರೊನಾ ಸೋಂಕು ಇರುವುದಾಗಿ

(ಮೊದಲ ಪುಟದಿಂದ) 25.7.1996 ರಂದು ಪಟ್ಟಣ ಪಂಚಾಯ್ತಿಯ ಪ್ರಥಮ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಕಳೆದ 20 ವರ್ಷಗಳಿಂದ ಆಡಳಿತ ನಡೆಸುತ್ತಾ ಪಂಚಾಯಿತಿಯನ್ನು ಬಿ.ಜೆ.ಪಿ. ಯ ಭದ್ರಕೋಟೆ ಮಾಡಿಕೊಂಡಿತ್ತು. ಬಹುಮತಕ್ಕೆ ಒಂದೆರಡು ಸ್ಥಾನಗಳ ಕೊರತೆ ಇದ್ದಾಗಲೂ ರಾಜಕೀಯ ತಂತ್ರಗಾರಿಗೆ ನಡೆಸಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಬಿಜೆಪಿಗೆ ಆಘಾತ: ಆದರೆ ಕಳೆದ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕೇವಲ 3 ಸದಸ್ಯರನ್ನು ಹೊಂದುವ ಮೂಲಕ ಭಾರೀ ಆಘಾತ ಎದುರಿಸಿತು. 11 ಸದಸ್ಯ ಬಲದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 4, ಜೆಡಿಎಸ್ 3 ಹಾಗೂ ಪಕ್ಷೇತರ (ಬಿಜೆಪಿ ಬಂಡಾಯ) ಸದಸ್ಯರೋರ್ವರು ಜಯಗಳಿಸಿದ್ದಾರೆ. ಮೈತ್ರಿಯಿಂದಾಗಿ ಕಾಂಗ್ರೆಸ್ 6 ರಲ್ಲಿ 4, ಜೆಡಿಎಸ್ 5 ರಲ್ಲಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಮೈತ್ರಿಯ ಫಲ: ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದುದರಿಂದ ಸೋಮವಾರಪೇಟೆ ಪ.ಪಂ. ಚುನಾವಣೆಯನ್ನೂ ಸಹ ಎರಡೂ ಪಕ್ಷಗಳು ಮೈತ್ರಿಯಾಗಿ ಎದುರಿಸಿದ್ದವು. ಪರಿಣಾಮ ಮೈತ್ರಿಪಕ್ಷಗಳು ಬಹುಮತ ಪಡೆದವು. ಎರಡೂ ಪಕ್ಷಗಳು ಸೇರಿ 7 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿ ಆಡಳಿತಕ್ಕೆ ತಡೆಯೊಡ್ಡುವ ಸನ್ನಿವೇಶ ಇದ್ದ ಸಂದರ್ಭವೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾತ್ರ ಘೋಷಣೆಯಾಗಲಿಲ್ಲ.

ಇದೀಗ ಒಂದೂವರೆ ವರ್ಷದ ಬಳಿಕ ಮೀಸಲಾತಿ ನಿಗದಿಯಾಗಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದರ ಪರಿಣಾಮ ಸ್ಥಳೀಯ ಪ.ಪಂ.ಗೂ ತಟ್ಟಲಿದೆಯೇ? ಎಂಬದನ್ನು ಕಾದುನೋಡಬೇಕಿದೆ.

ಎಲ್ಲರೂ ಆಕಾಂಕ್ಷಿಗಳೇ: ಪ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವದರಿಂದ ಒಂದಿಬ್ಬರನ್ನು ಹೊರತುಪಡಿಸಿ ಬಹುತೇಕರು ಆಕಾಂಕ್ಷಿಗಳೇ ಆಗಿದ್ದಾರೆ. ಇದರಲ್ಲಿ ಈ ಹಿಂದೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾಗಿ ಅನುಭವ ಹೊಂದಿರುವ ಬಿಜೆಪಿಯ ನಳಿನಿ ಗಣೇಶ್, ಕಾಂಗ್ರೆಸ್‍ನ ಶೀಲಾ ಡಿಸೋಜ, ಸಂಜೀವ, ವೆಂಕಟೇಶ್, ನಾಮನಿರ್ದೇಶನ ಸದಸ್ಯರಾಗಿದ್ದ ಉದಯಶಂಕರ್, ಜೆಡಿಎಸ್‍ನ ಜಯಂತಿ ಶಿವಕುಮಾರ್ ಅವರುಗಳು ಮುಂಚೂಣಿಯಲ್ಲಿದ್ದರೆ, ಇದೇ ಪ್ರಥಮವಾಗಿ ಜಯಗಳಿಸಿರುವ ಬಿಜೆಪಿಯ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಪಕ್ಷೇತರ ಸದಸ್ಯ ಶುಭಕರ್ ಅವರುಗಳೂ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ತಮ್ಮದೇ ಬಳಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಸಾಧ್ಯಾಸಾಧ್ಯತೆಗಳೇನು?: ಈ ಹಿಂದೆ ಮೈತ್ರಿ ಸರ್ಕಾರ ಇದ್ದ ಸಂದರ್ಭ ಸ್ಥಳೀಯವಾಗಿ ಚುನಾವಣೆ ಎದುರಿಸಿ ಮೈತ್ರಿ ಪಕ್ಷಗಳು ಬಹುಮತ ಪಡೆದಿವೆ. ನಂತರ ಸರ್ಕಾರ ಬದಲಾಗಿದ್ದು, ಇದೀಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಸ್ಥಳೀಯವಾಗಿ 2018ರಲ್ಲಿದ್ದ ಮೈತ್ರಿ ಈಗಲೂ ಮುಂದುವರೆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಅಧಿಕಾರ ಹಿಡಿಯಬಹುದು.

ಎರಡೂ ಪಕ್ಷಗಳು ಸೇರಿ 7 ಸದಸ್ಯರಿದ್ದು, ಬಹುಮತಕ್ಕೆ ಕೊರತೆಯಾಗುವದಿಲ್ಲ. ಆದರೆ ಕಾಂಗ್ರೆಸ್‍ನ ನಾಲ್ಕು ಮಂದಿಯೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೇ ಆಗಿದ್ದಾರೆ. ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್ ಅಧ್ಯಕ್ಷರಾಗುವ ಬಯಕೆಯಲ್ಲಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಉಳಿದವರು ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಯಿದೆ. ಈ ಅಸಮಾಧಾನವನ್ನು ಬಿಜೆಪಿ ಎನ್‍ಕ್ಯಾಷ್ ಮಾಡಿಕೊಳ್ಳುವ ತಂತ್ರಗಾರಿಕೆ ಹೆಣೆಯುತ್ತಿದೆ ಎನ್ನಲಾಗಿದೆ.

ಈ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಏರಿದ್ದು, ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಜೆಪಿಯ ತಂತ್ರಗಾರಿಕೆ ನಿಂತಿದೆ ಎನ್ನಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ ಸ್ಥಳೀಯ ಪ.ಪಂ. ಬಗ್ಗೆ ಶಾಸಕ ರಂಜನ್ ಹೆಚ್ಚು ಗಮನಹರಿಸಿರಲಿಲ್ಲ. ಇದೀಗ ಅಧಿಕಾರದಲ್ಲಿರುವದರಿಂದ ಪ್ರತಿಷ್ಠೆಯ ಪ್ರಶ್ನೆಯಾಗಿ ಪ.ಪಂ.ನಲ್ಲೂ ಅಧಿಕಾರ ಸ್ಥಾಪಿಸುತ್ತಾರಾ? ಎಂಬ ಬಗ್ಗೆ ಕಾದು ನೋಡಬೇಕಿದೆ.

ಇದೀಗ 3 ಮಂದಿ ಮಾತ್ರ ಬಿಜೆಪಿ ಸದಸ್ಯರಿದ್ದು, ಪಕ್ಷೇತರ ಸದಸ್ಯರ ಬೆಂಬಲ ದೊರೆತರೂ ಸ್ಥಾನಗಳ ಸಂಖ್ಯೆ 4 ಮಾತ್ರ ಆಗಲಿದೆ. ಇದರೊಂದಿಗೆ ಶಾಸಕರು ಮತ್ತು ಸಂಸದರ ಮತವೂ ಸೇರಿದರೆ 6 ರ ಸಂಖ್ಯಾಬಲವಾಗುತ್ತದೆ. ಬಹುಮತಕ್ಕೆ 1 ಮತದ ಕೊರತೆ ಕಾಡಲಿದ್ದು, ಇದನ್ನು ಸರಿದೂಗಿಸಬೇಕಾದರೆ ಆಪರೇಷನ್ ಕಮಲ ಅನಿವಾರ್ಯವಾಗಲಿದೆ. ಇಂತಹ ಆಪರೇಷನ್‍ಗೆ ಒಳಗಾಗುವ ಸದಸ್ಯರು ಯಾರು ಎಂಬ ಬಗ್ಗೆ ಬಿಜೆಪಿಯಲ್ಲಿ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.

ಪಕ್ಷೇತರರಾಗಿ ಗೆದ್ದಿರುವ ಶುಭಕರ್ ಅವರನ್ನು ಈಗಾಗಲೇ ಬಿಜೆಪಿ ಪ್ರಮುಖರು ಸಂಪರ್ಕಿಸಿದ್ದಾರೆ. ಬಿಜೆಪಿಗೆ ಬೆಂಬಲ ನೀಡಿದರೆ ಶುಭಕರ್‍ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೂ ಬಹುಮತಕ್ಕೆ ಇನ್ನೂ ಒಂದು ಸ್ಥಾನದ ಅವಶ್ಯಕತೆಯಿದ್ದು, ಯಾವ ಪಕ್ಷದ ಸದಸ್ಯರನ್ನು ಕರೆತರಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಮಧ್ಯೆ ಬೇರೆ ಪಕ್ಷವನ್ನು ಬೆಂಬಲಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವ ಭೀತಿಯೂ ಇರುವದರಿಂದ, ಕಾಯ್ದೆಯ ಕಾನೂನಿನಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಗೆದ್ದಿರುವ ಸದಸ್ಯರು: ಬಿಜೆಪಿಯಿಂದ ನಳಿನಿ ಗಣೇಶ್, ಬಿ.ಆರ್. ಮಹೇಶ್, ಪಿ.ಕೆ. ಚಂದ್ರು. ಕಾಂಗ್ರೆಸ್‍ನಿಂದ ಉದಯಶಂಕರ್, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಸಂಜೀವ. ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ನಾಗರತ್ನ, ಜೀವನ್. ಪಕ್ಷೇತರ- ಶುಭಕರ್.

- ವಿಜಯ್ ಹಾನಗಲ