ಸೋಮವಾರಪೇಟೆ, ಮಾ. 12: ಇಲ್ಲಿನ ಅಂಚೆ ಕಚೇರಿಯಲ್ಲಿ ತಾ. 16 ಮತ್ತು 20 ರಂದು ಆಧಾರ್ ಶಿಬಿರ ಮತ್ತು ಅಂಚೆ ಮೇಳ ಆಯೋಜಿಸಲಾಗಿದೆ.

ಶಿಬಿರದಲ್ಲಿ ಆಧಾರ್ ಕಾರ್ಡ್‍ನಲ್ಲಿ ಹೊಸ ದಾಖಲಾತಿ, ಆಧಾರ್ ನವೀಕರಣ ಅಥವಾ ತಿದ್ದುಪಡಿ, ಮೊಬೈಲ್ ಸಂಖ್ಯೆ ತಿದ್ದುಪಡಿ, ವಿಳಾಸ ಬದಲಾವಣೆ/ನವೀಕರಣ, ಹೆಸರು ಅಥವಾ ಜನ್ಮ ದಿನಾಂಕ ತಿದ್ದುಪಡಿ, ಬಯೋಮೆಟ್ರಿಕ್ ನವೀಕರಣ, ಆಧಾರ್ ಕಾರ್ಡ್‍ನ ಹೊಸ ದಾಖಲಾತಿ, ಗ್ರಾಮೀಣ ಅಂಚೆ ಜೀವವಿಮೆ, ಎಸ್.ಬಿ., ಆರ್.ಡಿ., ಎಸ್‍ಎಸ್‍ಎ ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯಲಾಗುವದು ಎಂದು ಪ್ರಕಟಣೆ ತಿಳಿಸಿದೆ.