ಮಡಿಕೇರಿ, ಮಾ. 12: ಗೋಣಿಕೊಪ್ಪಲು - ಅಮ್ಮತ್ತಿ ಮಾರ್ಗದ ಖಾಸಗಿ ನಿವೇಶನವೊಂದರ ಮರದ ಕೆಳಗಡೆ ಕುಳಿತುಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರಿಗೆ ಲಭಿಸಿರುವ ಖಚಿತ ಮಾಹಿತಿ ಮೇರೆಗೆ, ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂದರ್ಭ ಸುರೇಶ್ ರೈ, ನಾಗರಾಜ್, ಶಿವಕುಮಾರ್, ಶಿಬಿ, ದಾದು, ಎಸ್.ಟಿ. ಮೂರ್ತಿ ಎಂಬವರನ್ನು ಸೆರೆ ಹಿಡಿದು ನಗದು ರೂ. 18,790 ಸಹಿತ ಇತರ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರಾದ ಮಣಿಕಂಠ, ಕೃಷ್ಣಮೂರ್ತಿ, ಶೇಖರ್, ಸುನಿಲ್, ಅವಿನಾಶ್, ಮಹೇಶ್ ಪಾಲ್ಗೊಂಡಿದ್ದರು.