ಕಣಿವೆ, ಮಾ. 11: ಈಗ ಎಲ್ಲೆಡೆ ಕೊರೋನಾ ಎಂಬ ಭಯಾನಕ ರೋಗ ಭೀತಿ ಸದ್ದುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಪಂಚಾಯತಿ ಆಡಳಿತ ಜಂಟಿಯಾಗಿ ಸ್ವಚ್ಛತೆ ಕಾಪಾಡುವತ್ತ ಜಾಗೃತಿ ಉಂಟು ಮಾಡುತ್ತಿವೆ. ಆದರೆ ಕುಶಾಲನಗರ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುವುದಿರಲಿ, ಇರುವ ಚರಂಡಿಗಳ ಸ್ವಚ್ಛತೆಗೆ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಿಂದ ಹಾರಂಗಿ ಕಡೆಗೆ ತೆರಳುವ ಮಾರ್ಗದ ಕೋಣಮಾರಮ್ಮ ದೇವಾಲಯದ ಮುಂಬದಿ ರಸ್ತೆಯ ಬದಿಯಲ್ಲಿನ ಚರಂಡಿಯಲ್ಲಿ ಗೃಹಬಳಕೆಯ ತ್ಯಾಜ್ಯ ನೀರು ತುಂಬಿ ನಿಂತಿದ್ದು: ಸಾಂಕ್ರಾಮಿಕ ಕ್ರಿಮಿಗಳು ಉತ್ಪತ್ತಿಯಾಗುತ್ತಿದ್ದು ರೋಗ ಹರಡುವ ಮುನ್ನಾ ಕೂಡಲೇ ಚರಂಡಿಯನ್ನು ಸ್ವಚ್ಛಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಚರಂಡಿಯಲ್ಲಿ ಮಲಿನ ನೀರು ನಿಲುಗಡೆಯಾಗದಂತೆ ಕ್ರಮ ವಹಿಸಬೇಕೆಂದು ಕೋಣ ಮಾರಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎಂ.ಎಸ್. ಶಿವಾನಂದ, ದಿನೇಶ್, ರೇವಣ್ಣ, ಪಾರ್ವತಿ, ಕಮಲ ಹಾಗೂ ಪಂಚಾಯತಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

- ಕೆ.ಎಸ್. ಮೂರ್ತಿ