ಮಡಿಕೇರಿ, ಮಾ. 11: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಯಾವುದೇ ಯೋಜನೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ

ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಎಂ. ಮಿನಿ ವಿಮಾನ ನಿಲ್ದಾಣ ಕುರಿತಾದ ಪ್ರಶ್ನೆಗೆ ಕೂಡಿಗೆ ಗ್ರಾಮದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುವದು. ಈ ಯೋಜನೆಗೆ ಪ್ರಸ್ತುತ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದರು. ಬಳಿಕ ಕಾಫಿ ಬೆಳೆಗಾರರ ಕುರಿತು ರಂಜನ್ ಹಲವು ಪ್ರಶ್ನೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು.ಯಾವ ಯಾವ ಬೆಳೆಗಳನ್ನು ಬೆಳೆಯಲು ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಎಂ. ವಾಣಿಜ್ಯ ಬೆಳೆಗಳಾದ ಕಾಫಿ, ಟೀ ಮತ್ತು ರಬ್ಬರ್ ಬೆಳೆಗಳನ್ನು ಹೊರತುಪಡಿಸಿದಂತೆ ರಾಗಿ, ಭತ್ತ, ಕಬ್ಬು, ಜೋಳ, ತೆಂಗು, ಅಡಿಕೆ, ತೊಗರಿಕಾಯಿ ಮುಂತಾದ ಬೆಳೆಗಳನ್ನು ಬೆಳೆಯಲು 10 ಹೆಚ್.ಪಿ.ವರೆಗಿನ ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದೆ ಎಂದರು. ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಕುರಿತ ಪ್ರಶ್ನೆಗೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘ ಮತ್ತು ಇತರರು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯು ಪರಿಶೀಲನೆ ಹಂತದಲ್ಲ್ಲಿದೆ. ಸರ್ಕಾರವು ಕೊಡಗು ಜಿಲ್ಲೆ (ಮೊದಲ ಪುಟದಿಂದ) ರೈತರನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ರೈತರ 10 ಹೆಚ್.ಪಿ.ವರೆಗಿನ ಕೃಷಿ ನೀರಾವರಿ ಪಂಪ್‍ಸೆಟ್‍ಗಳಿಗೆ ಐಖಿ 4 (8) ಜಕಾತಿಯಡಿ ಈಗಾಗಲೇ ಉಚಿತವಾಗಿ ವಿದ್ಯುತ್ ಒದಗಿಸುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಳಿಗೆ ಬಳಸುವ 10 ಹೆಚ್.ಪಿ.ವರೆಗಿನ ವಿದ್ಯುತ್ತನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ದರ ಪರಿಷ್ಕರಣೆ ಆದೇಶದಂತೆ ಐಖಿ 4 (ಅ) (i) ಜಕಾತಿಯಡಿಯಲ್ಲಿ ಸೇರ್ಪಡೆ ಯಾಗಿದ್ದು, ಪ್ರಸ್ತುತ ಈ ಜಕಾತಿಯಡಿಯಲ್ಲಿ ಬಳಸುವ ವಿದ್ಯುತ್‍ಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯ ಹಂತದಲ್ಲಿದೆ ಎಂದು ಸಿ.ಎಂ. ನುಡಿದರು.

ಕೊಡಗಿನಲ್ಲಿ ದೀನ್ ದಯಾಳ್ ಯೋಜನೆ ಪ್ರಗತಿ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಎಂ. ಕೃಷಿ ಮತ್ತು ಕೃಷಿಯೇತರ ಫೀಡರ್‍ಗಳ ಬೇರ್ಪಡಿಸುವಿಕೆಯಡಿ (ಲಿಂಕ್ ಲೈನ್ ಕಾಮಗಾರಿಗಳು) 09 ಸಂಖ್ಯೆ ಫೀಡರ್‍ಗಳ ಕಾಮಗಾರಿಗಳು ಪೂರ್ಣಗೊಂಡಿದೆ.

ವಿದ್ಯುತ್ ಪ್ರಸರಣ ಹಾಗೂ ವಿತರಣಾ ವ್ಯವಸ್ಥೆಯ ಬಲವರ್ಧನೆ ಮೂರು ಕಾಮಗಾರಿಗಳು ಪೂರ್ಣ ಗೊಂಡಿರುತ್ತದೆ. ಗ್ರಾಮೀಣ ವಿದ್ಯುದೀಕರಣದಡಿ ಒಟ್ಟು 901 ಬಿ.ಪಿ.ಎಲ್. ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಳೆದ 3 ವರ್ಷಗಳಲ್ಲಿ (2016-17ರಿಂದ ಜನವರಿ 2020ರವರೆಗೆ) ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒಟ್ಟು 80072 ಅರ್ಜಿಗಳು ನೋಂದಣ Âಗೊಂಡಿರುತ್ತವೆ.

ಕೊಡಗು ಜಿಲ್ಲೆಗೆ ಸಂಬಂಧಿಸಿ ದಂತೆ ಈ ಅವಧಿಯಲ್ಲಿ 319 ಅರ್ಜಿಗಳು ನೋಂದಣ Âಗೊಂಡಿದ್ದು, 244 ಸಂಖ್ಯೆಯ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುದೀಕರಣಕ್ಕೆ ಬಾಕಿ ಇರುವ 112 ಕೊಳವೆ ಬಾವಿಗಳ ಕಾಮಗಾರಿಗಳನ್ನು ಪೂರ್ಣಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದು, ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಕಾಮಗಾರಿ ಪೂರೈಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ರಂಜನ್ ಪ್ರಶ್ನೆಗೆ ಸಿ.ಎಂ. ಪ್ರತಿಕ್ರಿಯಿಸಿ ಕೊಡಗು ಜಿಲ್ಲೆ ಮಲೆನಾಡು ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ದುರ್ಗಮ ವಾದ ಭೂ ಪ್ರದೇಶವಾಗಿರುತ್ತದೆ. ಇಲ್ಲಿ ವರ್ಷದ ನಾಲ್ಕು ತಿಂಗಳು ಹೆಚ್ಚಿನ ಮಳೆಯಾಗುತ್ತದೆ. ಇದರಿಂದಾಗಿ ಕಾಮಗಾರಿಗಳ ಪ್ರಗತಿಯು ಕುಂಠಿತವಾಗಿದೆ. ಪ್ರಸ್ತುತ ಕಾಮಗಾರಿ ಗಳನ್ನು ಶೀಘ್ರವಾಗಿ ಪೂರ್ಣ ಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣ ಗೊಳಿಸದಿದ್ದಲ್ಲಿ ನಿಗಮದ ನಿಯಮಾನುಸಾರ ದಂಡ ವಿಧಿಸಿ ಕಾಮಗಾರಿ ಪೂರ್ಣಗೊಳಿಸ ಲಾಗುತ್ತದೆ ಎಂದರು.