ಸುಂಟಿಕೊಪ್ಪ, ಮಾ. 11: ಸುಂಟಿಕೊಪ್ಪ ಉಲುಗುಲಿ ಗ್ರಾಮದ ಪನ್ಯದಲ್ಲಿರುವ ಬೆಳ್ಳೆರಿಕಮ್ಮ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶದ ಪೂಜಾ ಕೈಂಕರ್ಯ ನಡೆಯಿತು.

ಸುಮಾರು ರೂ. 16 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ದೇವಾಲಯದಲ್ಲಿ ತಂತ್ರಿಗಳಾದ ಉಡುಪಿಯ ನೆಂಚಾರುವಿನ ವೇದ ಬ್ರಹ್ಮಶ್ರೀ ಕೇಶವ ಅಡಿಗರು, ನಾಗರಾಜು ಅಡಿಗರು ಮತ್ತು ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ ಉಡುಪ ಅವರ ನೇತೃತ್ವದಲ್ಲಿ ಗಣಹೋಮ, ನವಗ್ರಹ ಹೋಮ ಇನ್ನಿತರ ಪೂಜಾ ವಿಧಿವಿಧಾನಗಳು ನಡೆದವು. ನಂತರ ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನದಾನ ನೆರವೇರಿತು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂತೋಳಿ ಚಂಗಪ್ಪ, ಗೌರವಾಧ್ಯಕ್ಷ ಎಸ್.ಬಿ.ಶಂಕರ್, ಉಪಾಧ್ಯಕ್ಷ ಪಟ್ಟೆಮನೆ ಶೇಷಪ್ಪ, ಕಾರ್ಯದರ್ಶಿ ಮಾಗಲು ವಸಂತ, ದೇವಾಲಯ ಸಮಿತಿ ಅಧ್ಯಕ್ಷ ಪಟ್ಟೆಮನೆ ಅನಿಲ್‍ಕುಮಾರ್, ಮೂಡೋಳಿ ಕೆಂಪಯ್ಯ, ದೇವತಕ್ಕ ದೇವರಾಜು, ಪದಾಧಿಕಾರಿಗಳು ಇತರರು ಇದ್ದರು.