ಮಡಿಕೇರಿ, ಮಾ.11: ಮಡಿಕೇರಿ ನಗರಸಭೆ ವ್ಯಾಪ್ತಿಯ ಸ್ಟುವರ್ಟ್ ಹಿಲ್‍ನ ಜಡ್ಜ್ ಕ್ವಾರ್ಟರ್ಸ್ ಹತ್ತಿರ ಮುಖ್ಯ ಕೊಳವೆ ಸೋರಿಕೆ ದುರಸ್ತಿ ಹಾಗೂ ಹೊಸ ಕೊಳವೆ ಅಳವಡಿಕೆ ಕಾಮಗಾರಿಗಾಗಿ ತಾ. 12 ರಂದು (ಇಂದು) ಇಂದಿರಾನಗರ, ಚಾಮುಂಡೇಶ್ವರಿ ನಗರ, ಜ್ಯೋತಿ ನಗರ, ಕ್ರಿಶ್ಚಿಯನ್ ಸ್ಮಶಾನದ ಸುತ್ತಮುತ್ತ, ಹೊಸ ಬಡಾವಣೆ, ಕೊಹಿನೂರ್ ಸರ್ಕಲ್, ಅಂಚೆ ಕಚೇರಿ, ಜಿ.ಟಿ ಸರ್ಕಲ್, ಮೈಸೂರು ರಸ್ತೆ, ಚೈನ್ ಗೇಟ್, ಮಲ್ಲಿಕಾರ್ಜುನ ನಗರ, ಪುಟಾಣಿ ನಗರ, ದೇಚೂರು, ಭಗವತಿ ನಗರ, ವಿದ್ಯಾನಗರ, ಮಹದೇವ ಪೇಟೆ, ಗಣಪತಿ ಬೀದಿ, ಹಿಲ್ ರಸ್ತೆ, ಮೂರ್ನಾಡು ರಸ್ತೆ, ಮಂಗಳೂರು ರಸ್ತೆ, ಪೆನ್ಷನ್ ಲೈನ್ ಮತ್ತು ಗೌಳಿಬೀದಿ ಪ್ರದೆಶಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಶೇಖರಿಸಿಕೊಂಡು ಪೋಲು ಮಾಡದೆ ಬಳಸುವಂತೆ ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.