ಮಡಿಕೇರಿ, ಮಾ.11 : ಕರ್ನಾಟಕ ರಾಜ್ಯ ಬುಡಕಟ್ಟುಗಳ ಸಂಶೋಧನಾ ಸಂಸ್ಥೆ ಮೈಸೂರು ಇವರ ವತಿಯಿಂದ ನಡೆಸಲಾಗುತ್ತಿದ್ದ ಕೊಡವರ ಕುಲಶಾಸ್ತ್ರೀಯ ಅಧ್ಯಯನ ವರದಿಯು ಇನ್ನೂ ಸ್ವೀಕೃತಿವಾಗಿರುವುದಿಲ್ಲ. ಈ ಬಗ್ಗೆ ತಜ್ಞರ ಸಮಿತಿಯ ಅಭಿಪ್ರಾಯ- ಸಲಹೆ ಪಡೆದು ಅಂತಿಮ ವರದಿಯನ್ನು ಶೀಘ್ರದಲ್ಲಿ ಸರಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ವರದಿಬಂದ ನಂತರ ಮುಂದಿನ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಉಪಮುಖ್ಯಮಂತ್ರಿ, ಸಮಾಜಕಲ್ಯಾಣ ಇಲಾಖಾಸಚಿವರಾಗಿರುವ ಗೋವಿಂದ ಎಂ. ಕಾರಜೋಳ ಅವರು ವಿಧಾನ ಪರಿಷತ್‍ನಲ್ಲಿ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಸದಸ್ಯೆ ವೀಣಾ ಅಚ್ಚಯ್ಯನವರು ನೀಡಿದ್ದ ಚುಕ್ಕೆಗುರುತಿನ ಪ್ರಶ್ನೆ ಕುರಿತಾಗಿ ನಡೆದ ಚರ್ಚೆಯ ಸಂದರ್ಭ ಸಚಿವರು ಈ ಬಗ್ಗೆ ಮಾಹಿತಿ ಒದಗಿಸಿದರು.
ಈ ಹಿಂದೆ ಅಧ್ಯಯನ ಕಾರ್ಯ ನಡೆಸಲಾಗುತ್ತಿದ್ದು ಇದಕ್ಕೆ ಜಿಲ್ಲೆಯ ಕೆಲವರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ತದನಂತರ ಕುಲಶಾಸ್ತ್ರೀಯ ಅಧ್ಯಯನವನ್ನು ಮುಂದುವರೆಸಲಾಗಿದೆ. ಪ್ರಸ್ತುತ ಕ್ಷೇತ್ರಕಾರ್ಯ ಪೂರ್ಣಗೊಂಡಿದ್ದು ಕರಡು ವರದಿ ತಯಾರಿಸುವ ಹಂತದಲ್ಲಿದೆ. ಸದರಿ ಕರಡು ವರದಿಯನ್ನು ತಜÐರ ಸಮಿತಿಯ ಅಭಿಪ್ರಾಯ ಸಲಹೆ ಪಡೆದು ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಇದಾದ ನಂತರ ಮುಂದಿನ ಕ್ರಮವಹಿಸ ಲಾಗುವದು ಎಂದು ಅವರು ಉತ್ತರಿಸಿದ್ದಾರೆ. ಈ ಸಂದರ್ಭ ಮಾತನಾಡಿದ ವೀಣಾಅಚ್ಚಯ್ಯ ಅವರು ಈ ಬಗ್ಗೆ ಪ್ರಸ್ತುತ ವಿರೋಧ ಇಲ್ಲ ಕೊಡವರ ಜೀವನ ಕ್ರಮ ಭಾಷೆ, ಸಂಸ್ಕøತಿ- ಸಂಪ್ರದಾಯ, ಹುಟ್ಟು-ಸಾವು, ಧಾರ್ಮಿಕತೆ ಹೀಗೆ ಎಲ್ಲವೂ ವಿಶಿಷ್ಟವಾಗಿರುವದಾಗಿ ಗಮನಸೆಳೆದು ಕ್ರಮವಹಿಸಲು ಕೋರಿದರು.