ಮಡಿಕೇರಿ, ಮಾ. 11: ರಾಜ್ಯದ ವಿವಿಧೆಡೆಗಳಲ್ಲಿನ ನಗರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮುಂದಿನ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರಕಾರ ಮೀಸಲಾತಿಯನ್ವಯ ಘೋಷಣೆ ಮಾಡಿ ಆದೇಶಿಸಿದೆ. ರಾಜ್ಯಪಾಲರ ಆದೇಶಾನುಸಾರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎ. ವಿಜಯ ಕುಮಾರ್ ಇಂದು ಮೀಸಲಾತಿ ಮಡಿಕೇರಿ, ಮಾ. 11: ರಾಜ್ಯದ ವಿವಿಧೆಡೆಗಳಲ್ಲಿನ ನಗರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮುಂದಿನ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರಕಾರ ಮೀಸಲಾತಿಯನ್ವಯ ಘೋಷಣೆ ಮಾಡಿ ಆದೇಶಿಸಿದೆ. ರಾಜ್ಯಪಾಲರ ಆದೇಶಾನುಸಾರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎ. ವಿಜಯ ಕುಮಾರ್ ಇಂದು ಮೀಸಲಾತಿ ಆಡಳಿತಾವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.ಇದೀಗ ಮತ್ತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾ ಗಿರುವದರಿಂದ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಬಾರಿ ಮೀಸಲಾತಿ ಬಂದ ಬಳಿಕ ಉಳಿದೆಲ್ಲ ವರ್ಗದ ಮೀಸಲಾತಿ ಜಾರಿಯಾಗುವವರೆಗೂ ಮತ್ತೆ ಪುನರಾವರ್ತನೆ ಮಾಡು ವಂತಿಲ್ಲ ಎಂದು ನಿಯಮವಿದೆ. ಇದೀಗ ಸರಕಾರ ಹೊರಡಿಸಿರುವ ಮೀಸಲಾತಿ ತಪ್ಪಾಗಿದೆ. ಇದರ ವಿರುದ್ಧ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ; ಗಂಭೀರ ಪರಿಗಣನೆಯೊಂದಿಗೆ ಮೀಸಲಾತಿ

(ಮೊದಲ ಪುಟದಿಂದ) ರದ್ದಾಗಲಿದೆ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಘೋಷಣೆಯಾಗಿದೆ. ಕುಶಾಲನಗರ ಪ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಸ್ಥಾನಕ್ಕೆ ಮೀಸಲಾಗಿದೆ. ಸೋಮವಾರಪೇಟೆ ಪ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ. ವೀರಾಜಪೇಟೆ ಪ.ಪಂ.ನಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ.

ವಿಶೇಷವೆಂದರೆ ಪ.ಪಂ.ಗಳಿಗೆ ಚುನಾವಣೆ ನಡೆದು ಒಂದು ವರ್ಷ ಕಳೆದಿದೆ; ಇದೀಗ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಗೊಂಡಿದೆ. ಬಹುತೇಕ ಸದಸ್ಯರುಗಳಿಗೆ ಯಾರು ಅಧ್ಯಕ್ಷರಾಗಬಹುದೆಂಬದೇ ಮರೆತು ಹೋದಂತಿದೆ. ಇದೀಗ ಮೀಸಲಾತಿ ಪ್ರಕಟವಾಗಿರುವದರಿಂದ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ.