ಕುಶಾಲನಗರ, ಮಾ. 11: ಕೇರಳ ಸಮಾಜ ವತಿಯಿಂದ ಸಾರ್ವಜನಿಕರಿಗೆ ಉಚಿತ ಕಣ್ಣು ಮತ್ತು ದಂತ ತಪಾಸಣಾ ಶಿಬಿರ ನಡೆಯಿತು. ಇಂದಿರಾ ಬಡಾವಣೆಯಲ್ಲಿರುವ ಸಮಾಜದ ಕಟ್ಟಡದಲ್ಲಿ ನಡೆದ ಶಿಬಿರದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ 150ಕ್ಕೂ ಅಧಿಕ ಜನರು ತಪಾಸಣೆಯಲ್ಲಿ ಪಾಲ್ಗೊಂಡರು.

ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸಂಸ್ಥೆ ಮತ್ತು ಮಡಿಕೇರಿ ಸ್ಮಿತಾ ಐ ಕೇರ್ ಸೆಂಟರ್ ವೈದ್ಯರ ತಂಡ ರೋಗಿಗಳನ್ನು ಪರಿಶೀಲನೆ ನಡೆಯಿತು. 50 ಮಂದಿಗೆ ಉಚಿತ ಕನ್ನಡಕವನ್ನು ವಿತರಣೆ ಮಾಡಲಾಯಿತು. ದಂತ ವೈದ್ಯ ಕಾಲೇಜಿನ ವೈದ್ಯರುಗಳಾದ ಡಾ. ಅಲೀಮ, ಡಾ. ಸಂಗೀತ, ಡಾ. ಅಂಜಲಿ, ಡಾ. ಎಂ.ಕೆ. ತಾಜುನ್ನಿಸಾ, ಡಾ. ಅಭಿರಾಮಿ, ನೇತ್ರ ತಜ್ಞ ಡಾ. ಪ್ರಶಾಂತ್ ಮತ್ತು ತಂಡ ಶಿಬಿರಾರ್ಥಿಗಳ ಪರೀಕ್ಷೆ ನಡೆಸಿದರು.

ಸಮಾಜದ ಅಧ್ಯಕ್ಷ ಕೆ.ಆರ್. ಶಿವಾನಂದನ್, ಉಪಾಧ್ಯಕ್ಷ ಎಂ.ಜಿ. ಪ್ರಕಾಶ್, ಕಾರ್ಯದರ್ಶಿ ಕೆ.ಜೆ. ರಾಬಿನ್, ಖಜಾಂಚಿ ಬಿ.ಸಿ. ಆನಂದ್, ಸಲಹಾ ಸಮಿತಿಯ ಕೆ.ಕೆ. ಭಾಸ್ಕರ್, ಸದಸ್ಯರಾದ ಕೆ.ಆರ್. ರಾಜೇಶ್ ಮತ್ತು ಪದಾಧಿಕಾರಿಗಳು ಇದ್ದರು.