ಕಣಿವೆ, ಮಾ. 11: ಜನಸಾಮಾನ್ಯರು ಮತ್ತು ಕಡುಬಡವರಿಗೆ ಉತ್ತಮ ಆರೋಗ್ಯ ಸೇವೆಯ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಆರಂಭಿಸಿರುವ ಆಯುಷ್ ಇಲಾಖೆಯ ಆಸ್ಪತ್ರೆಯನ್ನು, ಸರ್ಕಾರಿ ಆಸ್ಪತ್ರೆಯ ಮೊದಲ ಮಹಡಿಯ ಯಾವುದೋ ಒಂದು ಕೊಠಡಿಯಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದೆ. ಆದರೆ ಆ ಆರೋಗ್ಯ ಘಟಕವನ್ನು ಹುಡುಕಾಡಲು ರೋಗಿಗಳಿಗೆ ಹರಸಾಹಸವಾಗಿರುವುದರಿಂದ ಆರೋಗ್ಯ ಇಲಾಖೆಗೆ ಸೇರಿದ ಮುಖ್ಯ ರಸ್ತೆಯ ಬದಿಯಲ್ಲಿರುವ; ಸಿಬ್ಬಂದಿ ವಸತಿಗೃಹದಲ್ಲೇ ಆರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳ ಹಿಂದೆ ಕುಶಾಲನಗರದ ಸರ್ಕಾರಿ ಆಸ್ಪತ್ರೆ ಬಳಿಯ ಆರೋಗ್ಯ ಸಿಬ್ಬಂದಿಯ ವಸತಿಗೃಹದಲ್ಲಿ ಆರಂಭಿಸಲಾಗಿತ್ತು. ಆದರೆ ಈ ಆಸ್ಪತ್ರೆಗೆ ಸ್ವಂತ ಕಟ್ಟಡ ಭಾಗ್ಯ ಒದಗಿ ಬಂದಿರುವುದರಿಂದ ನೂತನ ಕಟ್ಟಡ ಸಿದ್ಧವಾಗುವವರೆಗೆ ಸರ್ಕಾರಿ ಆಸ್ಪತ್ರೆಯ ಒಳಾವರಣದ ಮಹಡಿಯಲ್ಲಿ ತೆರೆಯಲಾಗಿದೆ. ಬದಲಾಗಿ ಘಟಕವನ್ನು ಖಾಲಿಯಿರುವ ವಸತಿ ಗೃಹದಲ್ಲಿ ತೆರೆದರೆ ರೋಗಿಗಳಿಗೂ ಅನುಕೂಲವಾಗಲಿದೆ. ಎಂದು ಪಂಚಾಯಿತಿ ಸದಸ್ಯ ಖಲೀಮುಲ್ಲ ಹಾಗೂ ಅಮೃತರಾಜು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
- ಕೆ.ಎಸ್. ಮೂರ್ತಿ