ಸಿದ್ದಾಪುರ, ಮಾ. 11: ಸೇವಾ ಸಂಸ್ಥೆಗಳು ಮಾಡುವ ಕಾರ್ಯಕ್ರಮಗಳು ಪ್ರೀತಿ ಮಮಕಾರದಿಂದ ಮಾಡುವಂತಗಾಬೇಕು ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ರೋನಾಲ್ಡ್ ಗೋಮ್ಸ್ ಅಭಿಮತ ವ್ಯಕ್ತಪಡಿಸಿದರು.
ಅಮ್ಮತ್ತಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕೊಡವ ಅಸೋಸಿಯೇಷನ್ ಕ್ಲಬ್ ಸಭಾಂಗಣದಲ್ಲಿ ನಡೆದ ವಲಯ ಸಂಸ್ಥೆಗೆ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆ 100 ಕ್ಕಿಂತ ಮಿಗಿಲಾದ ದೇಶಗಳಲ್ಲಿ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
ಅಮತ್ತಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಡಿಕೇರಿಯಂಡ ಜ್ಯೋತಿ ಪೊನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ; ಸಂಸ್ಥೆಯು ಪ್ರಸ್ತುತ ಸಾಲಿನಲ್ಲಿ ಹಲವಾರು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಮ್ಮತ್ತಿ ಭಾಗದ ಜನತೆಗೆ ದಂತ ಚಿಕಿತ್ಸಾ ಶಿಬಿರ ಪ್ರೌಢಶಾಲೆಯಲ್ಲಿ ನಡೆದ ಎನ್.ಎಸ್.ಎಸ್. ಶಿಬಿರದಲ್ಲಿ ಮತ್ತು ಆನೆಚೌಕೂರುವಿನ ಅರಣ್ಯ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾಗಿ ಸಸಿಗಳನ್ನುÀÀ ನೆಡಲಾಯಿತು. ಭಾಗವಹಿಸುವಿಕೆಯಿಂದ ಕಾರ್ಯಕ್ರಮಗಳು ಸುಗಮವಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಲಯನ್ ಸವಿತ ಬೋಪಣ್ಣ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಗೆ ನೂತನವಾಗಿ ಸದಸ್ಯತ್ವ ಪಡೆದ ತಾನ್ಯ ಕಾರ್ಯಪ್ಪ, ಮತ್ತು ಪ್ರಿಯಾ ಬೋಪಣ್ಣ ಅವರಿಗೆ ಜಿಲ್ಲಾ ರಾಜ್ಯಪಾಲರು ಬ್ಯಾಡ್ಜ್ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಪ್ರಥಮ ಮಹಿಳೆ ಅನಿತಾ ಗೋಮ್ಸ್, ಲ. ಜೆ.ಸಿ ಶೇಖರ್. ನವೀನ್ ಕಾರ್ಯಪ್ಪ, ರಕ್ಷೀತಾ ಅಯ್ಯಪ್ಪ, ಶಾಶ್ವತ್ ಬೋಪಣ್ಣ, ಪಿ.ಪಿ ಸೋಮಣ್ಣ, ಮತ್ತು ನವೀನ್ ಕಾರ್ಯಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾನ್ಯ ಕಾರ್ಯಪ್ಪ ಪ್ರಾರ್ಥಿಸಿ, ಜ್ಯೋತಿ ಪೊನ್ನಪ್ಪ ಸ್ವಾಗತಿಸಿದರು, ಸವಿತ ಚೆಂಗಪ್ಪ ವಂದನಾರ್ಪಣೆ ಮಾಡಿದರು.